• Slide
    Slide
    Slide
    previous arrow
    next arrow
  • ಬಾವಿಗೆ ಬಿದ್ದ ಚಿರತೆಯ ರಕ್ಷಣೆ

    300x250 AD

    ಹೊನ್ನಾವರ: ತಾಲೂಕಿನ ಕೆರೆಕೋಣ ಸಮೀಪ ಮನೆಯ ಬಾವಿಯಲ್ಲಿ ಬಿದ್ದಿದ್ದ ಚಿರತೆಯನ್ನ ಸಾರ್ವಜನಿಕರ ಸಹಕಾರದ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.

    ಸಾಲ್ಕೋಡ್ ಗ್ರಾಮದ ಕೆರೆಕೋಣ ಸಮೀಪದಲ್ಲಿ ಅಂದಾಜು ಒಂದೂವರೆ ವರ್ಷ ವಯಸ್ಸಿನ ಚಿರತೆಯೊಂದು ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿತ್ತು. ಚಿರತೆ ಬಾವಿಯಿಂದ ಮೇಲೆ ಬರಲು ಹರಸಾಹಸ ಪಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

    300x250 AD

    ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು, ಸಾರ್ವಜನಿಕರ ಸಹಕಾರದ ಮೇರೆಗೆ ಏಣಿ ಹಾಗೂ ಬಲೆ ಮುಂತಾದ ರಕ್ಷಣಾ ಸಲಕರಣೆಯನ್ನು ಬಳಸಿ ಸುರಕ್ಷಿತವಾಗಿ ಚಿರತೆಯನ್ನು ಮೇಲಕ್ಕೆತ್ತಿ ಕಾಡಿಗೆ ಬಿಟ್ಟಿದ್ದಾರೆ. ಆರ್‌ಎಫ್‌ಓ ವಿಕ್ರಂ ರೆಡ್ಡಿ ಸಲಹೆ ಮೇರೆಗೆ ಸಿಬ್ಬಂದಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top