Slide
Slide
Slide
previous arrow
next arrow

ವಾರಣಾಸಿಯಲ್ಲಿ ಹನುಮಾನ್‌ ಚಾಲೀಸಾ ಪಠಿಸಿದ ವಿದೇಶಿಗರು

300x250 AD

ನವದೆಹಲಿ: ವಾರಣಾಸಿ ಆಧ್ಯಾತ್ಮಿಕತೆಗೆ ಹೆಸರುವಾಸಿಯಾದ ಸ್ಥಳ. ಇಲ್ಲಿಗೆ ಆಗಮಿಸುವ ಭಕ್ತರು ದೇವಾಲಯಗಳಿಗೆ ಭೇಟಿ ನೀಡುವ ಜೊತೆಗೆ ಘಾಟ್‌ಗಳಿಗೆ ಭೇಟಿ ನೀಡುತ್ತಾರೆ ಮತ್ತು ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಕಾಶಿಗೆ ವಿದೇಶಿ ಪ್ರಜೆಗಳು ಕೂಡ ಬಹು ಸಂಖ್ಯೆಯಲ್ಲಿ ಆಗಮಿಸುತ್ತಾರೆ  ಮತ್ತು ಭಾರತೀಯ ಸಂಸ್ಕೃತಿಯನ್ನು ಆನಂದಿಸುತ್ತಾರೆ.

ಇತ್ತೀಚೆಗೆ ವಾರಣಾಸಿಯಲ್ಲಿ ಮೂವರು ವಿದೇಶಿಗರು ಹನುಮಾನ್ ಚಾಲೀಸಾ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಗಿಟಾರ್ ಮತ್ತು ಇತರ ಸಂಗೀತ ವಾದ್ಯಗಳೊಂದಿಗೆ ತಮ್ಮದೇ ಆದ ಸಂಗೀತ ಸ್ಪಿನ್ ನೀಡುವ ಮೂಲಕ ಹನುಮಾನ್‌ ಚಾಲೀಸಾವನ್ನು ಅವರು ಪಠಿಸುತ್ತಿರುವುದನ್ನು ಕಾಣಬಹುದು. ವಾರಣಾಸಿಯ ಸಂಕಟ್ ಮೋಚನ್ ಹನುಮಾನ್ ದೇವಸ್ಥಾನದಲ್ಲಿ ವಿಡಿಯೋ ರೆಕಾರ್ಡ್‌ ಆಗಿದೆ ಎಂದು ವರದಿಗಳು ತಿಳಿಸಿವೆ.ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರರು ಮೆಚ್ಚಿಕೊಂಡಿದ್ದಾರೆ. ಇಬ್ಬರೂ ವಿದೇಶಿಗರು ಒಟ್ಟಾಗಿ ಮಾಡಿದ ಪ್ರಯತ್ನಗಳನ್ನು ಕೆಲವರು ಶ್ಲಾಘಿಸಿದರೆ, ಕೆಲವರು ಅವರ ಭಾವುಕತೆ ಮತ್ತು ಸ್ವರ ಮಾಧುರ್ಯವನ್ನು ಮೆಚ್ಚಿಕೊಂಡಿದ್ದಾರೆ.

300x250 AD

ಕೃಪೆ :http://news13.in

Share This
300x250 AD
300x250 AD
300x250 AD
Back to top