Slide
Slide
Slide
previous arrow
next arrow

ಆತ್ಮಜ್ಯೋತಿ ಬೆಳಗಲಿ : ಸರ್ವರೂ ಸುಖವಾಗಿ ಬಾಳಲಿ

300x250 AD

ತಮಸೋಮಾ ಜ್ಯೋತಿರ್ಗಮಯ
ಸತ್ಯ ಜ್ಞಾನದಿ ಆತ್ಮಜ್ಯೋತಿಯು ಬೆಳಗಲಿ
ಆಚರಿಸೋಣ ಸತ್ಯ ಸತ್ಯ ದೀಪಾವಳಿ
ಜಗದ ಅಜ್ಞಾನ ಅಂಧಃಕಾರವು ತೊಲಗಲಿ
ಜ್ಞಾನ ಪ್ರಕಾಶದಿ ಜೀವನವು ಹೊಳೆಯಲಿ
ಪ್ರೇಮ ಶಾಂತಿ ಪವಿತ್ರತೆಗಳ ಪ್ರಭೆಯು ಹರಡಲಿ
ಮೂಡಿಬರಲಿ ಭಾವೈಕ್ಯತೆ ಸರ್ವ ಆತ್ಮಗಳಲ್ಲಿ
ಸದಾ ಮಾಡೋಣ ಈ ಶುಭಕಾಮನೆ
ಶಿವಪರಮಾತ್ಮನ ಆಶಯವೂ ಇದೇ ತಾನೆ
ಇದೇ ಆಗಿದೆ ನಿಜವಾದ ಸದ್ಭಾವನೆ

ಬೆಳಕಿನ ಹಬ್ಬವೆ0ದೇ ಪ್ರಸಿದ್ಧವಾಗಿರುವ ದೀಪಾವಳಿ ಹಬ್ಬ ವಿಶೇಷತೆಯಿಂದ ಕೂಡಿದೆ. ಈ ಸಂದರ್ಭದಲ್ಲಿ ಮನೆ, ವ್ಯಾಪಾರ ಮಳಿಗೆ, ಸಾರ್ವಜನಿಕ ಸ್ಥಳಗಳನ್ನು ಸುಣ್ಣಬಣ್ಣಗಳಿಂದ ಶೃಂಗರಿ ಸುತ್ತಾರೆ. ತದನಂತರ ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸುತ್ತಾರೆ. ಇದರಿಂದ ಮನಸ್ಸು ಪುಳಕಿತಗೊಂಡು ಆನಂದ ಸಂತೋಷದ ಅನುಭವವಾಗುತ್ತದೆ.

ಆದರೆ, ಮನೆ, ಅಂಗಳದಲ್ಲಿ ಬೆಳಕು ಮಾತ್ರ ಇದ್ದರೆ ಸಾಲದು ಮನದ ಅಂತರಂಗದಿಂದ ಹೊರಬರಬೇಕು. ಮನದಲ್ಲಿ ದುಃಖ, ಅಶಾಂತಿ, ಅತೃಪ್ತಿ, ಅಜ್ಞಾನ, ಅಂಧಕಾರ ಇದ್ದರೆ ನಿಜವಾದ ಸುಖದ ಅನುಭವವಾಗಲು ಸಾಧ್ಯವಿಲ್ಲ. ಆತ್ಮಜ್ಞಾನ, ಸ್ವ-ಜಾಗೃತಿ ಹಾಗೂ ಪರಮಾತ್ಮನ ಸಾನ್ನಿಧ್ಯದಿಂದ ಅಂತರ್‌ದೀಪ, ಆತ್ಮಜ್ಯೋತಿ ಬೆಳಗಿಸಬಹುದು. ಅನಾವಶ್ಯಕ ಇಚ್ಛೆ, ಅತಿಯಾಶೆ, ಅನ್ಯರ ಜೀವನಕ್ಕೆ ಹೋಲಿಸಿ ದುಃಖಿತನಾಗುವುದು, ಸ್ಪರ್ಧೆ ಮುಂತಾದವುಗಳು ಜೀವನ ಪಥದಲ್ಲಿ ಬರುವ ಅಜ್ಞಾನ- ಅಂಧಃಕಾರಗಳು.

‘ತಮಸೋಮಾ ಜ್ಯೋತಿರ್ಗಮಯ’ ಅಜ್ಞಾನದಿಂದ ಜ್ಞಾನದ ಕಡೆ, ಅಂಧಃಕಾರದಿಂದ ಪ್ರಕಾಶದ ಕಡೆ, ಬಂಧನದಿಂದ ಮುಕ್ತಿ ಕಡೆ, ಮರಣದಿಂದ ಅಮರತ್ವದ ಕಡೆ ಸಾಗಿಸು ಹೇ ಪ್ರಭು ಎಂದು ಪ್ರಾರ್ಥಿಸುತ್ತೇವೆ. ಅಲ್ಲವೇ? ದೇಹವೆ0ಬ ವಸ್ತ್ರವನ್ನು ಧರಿಸಿ ಆತ್ಮವೆಂಬ ಚೇತನ ಶಕ್ತಿಯಿಂದ ಪಾತ್ರ ಅಭಿನಯಿಸುವ ಮಾನವ ತನ್ನನ್ನು ತಾನೇ ಅರಿಯಲ್ಲಿಲ್ಲ. ನಾನು ಯಾರು, ಆತ್ಮ ಎಂದರೆ ಏನು, ನಾನು ಈ ಭೂಮಿಗೆ ಎಲ್ಲಿಂದ ಬಂದೆ, ಯಾಕೆ ಬಂದೆ, ಉದ್ದೇಶವೇನು? ಒಬ್ಬನೆ ಸೃಷ್ಟಿಕರ್ತನಾದ ಆ ಭಗವಂತ ಯಾರು? ಜನನ-ಮರಣ, ಪಾಪ-ಪುಣ್ಯ, ನರಕ-ಸ್ವರ್ಗ ಎಂದರೆ ಏನು? ಮುಂತಾದವುಗಳ ಸತ್ಯ ಜ್ಞಾನ ಇಲ್ಲದಿದ್ದರೆ ಅಜ್ಞಾನ ಅಂಧಕಾರವೆ ಅಲ್ಲವೇ? ಈ ಅಜ್ಞಾನ ಅಂಧಕಾರವನ್ನು ದೂರ ಮಾಡುವ ಸರ್ವ ಶಕ್ತಿವಂತನಾದ ಜ್ಞಾನ ಸಾಗರ, ಜ್ಞಾನ ಸೂರ್ಯನಾದ ಭಗವಂತನೊಬ್ಬನೇ. ಅವನು ನೀಡುತ್ತಿರುವ ಜ್ಞಾನವೆ ಶಕ್ತಿ, ಜ್ಞಾನವೇ ಬೆಳಕು, ಜ್ಞಾನವೆ ಅಮೃತವೆಂದು ಹೇಳುತ್ತಾರೆ.

ಆತ್ಮಜ್ಞಾನದಿಂದ ಆತ್ಮಜ್ಯೋತಿ ಬೆಳಗಿಸುವುದು : ದೇಹವೆಂಬ ಪಣತಿಯಲ್ಲಿ ಆತ್ಮವೆಂಬ ಚೇತನ ಜ್ಯೋತಿಯು ಸುಖ-ಶಾಂತಿ, ಆನಂದ ಪವಿತ್ರತೆ ಜ್ಞಾನ, ಶಕ್ತಿಗಳಿಂದ ಕೂಡಿರುವ ಚೈತನ್ಯ ಪುಂಜವಾಗಿದೆ. ಭಕ್ತಿ, ಪೂಜೆ, ಸತ್‌ಸಂಗ, ತ್ಯಾಗ . ವೈರಾಗ್ಯದ ಬಲದಿಂದ ಇದರಲ್ಲಿರುವ ಅವಗುಣಗಳನ್ನು ದೂರ ಮಾಡಿ ಸದ್ಗುಣಗಳನ್ನು ತುಂಬಿದರೆ ಆತ್ಮವೂ ಚೊಕ್ಕ ಬಂಗಾರದಂತೆ ಪ್ರಜ್ವಲಿತವಾಗಿ ಆತ್ಮಬಲ, ಮನೋಬಲ, ಜ್ಞಾನ ಬಲ, ಬುದ್ಧಿಬಲದ ವೃದ್ಧಿಯಾಗುತ್ತದೆ.

300x250 AD

ದೀಪಾವಳಿಯ ಶುಭ ಸಂದೇಶ : ಒಂದು ಪಣತಿಯಲ್ಲಿರುವ ದೀಪವು ಅಮಾವಾಸ್ಯೆಯ ಘೋರ ಕತ್ತಲನ್ನು ಕತ್ತರಿಸಿ ಬೆಳಕು ನೀಡುವ ಸಾಮರ್ಥ್ಯ ಹೊಂದಿದೆ. ಇಂಥ ಅನೇಕ ದೀಪಗಳಿಂದ ದೀಪಮಾಲೆಯಾಗಿ ಎಲ್ಲೆಡೆ ಪ್ರಕಾರವೇ ಪ್ರಕಾಶ, ಬೆಳಕೇ ಆನಂದದ ಅನುಭವವಾಗುತ್ತದೆ.

ಮಾನವ-ಆತ್ಮನಲ್ಲಿ ಅಗಾಧವಾದ ಶಕ್ತಿಯೂ ಆಡಕವಾಗಿದೆ. ಅವನ ಆತ್ಮಬಲದಿಂದ ಜಗತ್ತಿನಲ್ಲಿರುವ ದುಃಖ, ಅಶಾಂತಿ ಎಂಬ ಅಜ್ಞಾನ ಅಂಧಕಾರವನ್ನು ಕ್ಷಣಾರ್ದದಲ್ಲಿ ಕಿತ್ತು ಬೀಸಾಡಬಹುದು.

ವರ್ತಮಾನ ಸಮಯದಲ್ಲಿ ಮಾನವ ಮನಸ್ಸಿನ ದುರ್ಬಲತೆ, ಚಂಚಲತೆ, ದುರ್ಗುಣಗಳಿಗೆ ವಶನಾಗಿದ್ದಾನೆ. ಇದು ನರಕಾಸುರ (ನರಕ+ ಅಸುರಗುಣಗಳಿಂದ ತುಂಬಿರುವ)ನ ಸಾಮ್ರಾಜ್ಯವಾಗಿದೆ. ಎಂದರೆ ತಪ್ಪಾಗಲಾರದು.

ದೀಪರಾಜ ಪ್ರಕಾಶ ಪುಂಜ ಜಗಜ್ಯೋತಿ ವಿಶ್ವೇಶ್ವರ ಜ್ಞಾನ ಸೂರ್ಯನಾದ ಸತ್ಯಂ ಶಿವಂ ಸುಂದರ0 ನಿರಾಕಾರ ಜ್ಯೋತಿ ಸ್ವರೂಪನಾದ ಪರಮಾತ್ಮನು 1937 ರಲ್ಲಿ ಈ ಧರೆಗೆ ಪುನಃ ಆವತರಿಸಿದ್ದಾನೆ. (ಗೀತೆ 9 ಶ್ಲೋಕ-11) ಮಾನವೀಯ ತನುವಿನ ಆಧಾರ ಪಡೆದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೂಲಕ ಮಾನವಾತ್ಮರ ಆತ್ಮ ಜ್ಯೋತಿಯನ್ನು ಬೆಳಗಿಸುತ್ತಿದ್ದಾನೆ. ಉಚಿತವಾಗಿ ನೀಡುತ್ತಿರುವ ಸಹಜಜ್ಞಾನ ಹಾಗೂ ರಾಜಯೋಗ ಶಿಕ್ಷಣವು ಭಾರತ ಹಾಗೂ 130 ಪರ ರಾಷ್ಟçಗಳಲ್ಲಿ ಲಭಿಸುತ್ತಿದ್ದು ಲಕ್ಷಾಂತರ ಮಾನವನು ಇದರ ಬೆಳಕನ್ನು ನೀಡಿ ಕತ್ತಲನ್ನು ದೂರ ಮಾಡಿ ಪ್ರಕಾಶ ನೀಡುತ್ತಾನೆ. ಇದರಂತೆ ವಿಶ್ವದ ಮಾನವ ಆತ್ಮರಿಗೆ (ಆತ್ಮಜ್ಯೋತಿಗಳು) ಸ್ವಯಂಭು (ತಾನೆ ತಾನಾಗಿಯೇ ರಚನೆಗೊಂಡ) ಸ್ವಯಂ ಪ್ರಕಾಶಿತವಾಗಿರುವ ಪರಮ ಜ್ಯೋತಿ ಪರಮಾತ್ಮನು ಒಬ್ಬನೇ ಇದ್ದಾನಲ್ಲವೇ ? ನಿರಾಕಾರ ಜ್ಞಾನ ಸೂರ್ಯನಾದ ಅವನು ಸತ್ ಜ್ಞಾನವನ್ನು ಬೋಧಿಸಿ ಮಾನವಾತ್ಮರ ಆತ್ಮ ಜ್ಯೋತಿ ಬೆಳಗಿಸುತ್ತಾನೆ.
ಈ ಸತ್ಯ ಜ್ಞಾನವನ್ನು ಅರಿತು ಸತ್ಯ ದೀಪಾವಳಿಯನ್ನು ಆಚರಿಸೋಣ. ಹಾಗೆ ಭಾರತ ಭೂಮಿಯನ್ನು ಸ್ವಣಿಮ ಭಾರತ ಭೂಮಿಯನ್ನಾಗಿ ಸ್ಥಾಪಿಸೋಣ.

Share This
300x250 AD
300x250 AD
300x250 AD
Back to top