ಜೊಯಿಡಾ : ಲೋಕಾಯುಕ್ತ ಜಿಲ್ಲಾ ಕಚೇರಿಯ ಅಧಿಕಾರಿಗಳು ಜೊಯಿಡಾ ಪ್ರವಾಸಿ ಮಂದಿರದಲ್ಲಿ ಅ.20ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರಿಂದ ಅಹವಾಲು ಮತ್ತು ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ.
ತಾಲೂಕು ಅಥವಾ ಜಿಲ್ಲೆಯ ಯಾವುದೇ ಸರ್ಕಾರಿ ಕಾರ್ಯಾಲಯದಲ್ಲಿ ಸಾರ್ವಜನಿಕರಿಗೆ ಕೆಲಸ ಮಾಡಿಕೊಡುವಲ್ಲಿ ಅನಾವಶ್ಯಕ ವಿಳಂಬ, ಕೆಲಸ ಮಾಡಿ ಕೊಡಲು ಲಂಚಕ್ಕೆ ಬೇಡಿಕೆ ಇಡುವುದು ಅಥವಾ ಇನ್ಯಾವುದೇ ತರಹದ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ ಹಾಗೂ ನೌಕರರ ವಿರುದ್ಧ ಸಾರ್ವಜನಿಕರು ನಿಗದಿತ ನಮೂನೆ 1 ಮತ್ತು 2ರಲ್ಲಿ ಭರ್ತಿ ಮಾಡಿ ದೂರು ನೀಡಬಹುದು ಅಥವಾ ಕಾರವಾರ ಲೋಕಾಯುಕ್ತ ಕಛೇರಿಗೆ ಭೇಟಿ ನೀಡಿ ದೂರುಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 08382295293, 222250, 222022, 220198 ಗೆ ಸಂಪರ್ಕಿಸಿ ಎಂದು ಕಾರವಾರ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ.20ಕ್ಕೆ ಜೊಯಿಡಾದಲ್ಲಿ ಲೋಕಾಯುಕ್ತ ಅಹವಾಲು ಸ್ವೀಕಾರ
