Slide
Slide
Slide
previous arrow
next arrow

ಅ.16 ರಂದು ಶಿರಸಿಯಲ್ಲಿ ‘ಅಮೃತ ಕಲಾ ಮಹೋತ್ಸವ’

300x250 AD

ಶಿರಸಿ :  ನಗರದ ಶ್ರೀ ವಿದ್ಯಾದಿರಾಜ ಕಲಾಕ್ಷೇತ್ರದಲ್ಲಿ‌ ಅ.16 ಭಾನುವಾರದಂದು  ಅಮೃತ ಕಲಾ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. 

ಬೆಂಗಳೂರಿನ ಇಂಟರ್ನ್ಯಾಷನಲ್ ಆರ್ಟ್ಸ್ ಮತ್ತು ಕಲ್ಚರಲ್ ಫೌಂಡೇಶನ್ ಈ  ಕಾರ್ಯಕ್ರಮವನ್ನು  ಪ್ರಸ್ತುತ ಪಡಿಸುತ್ತಿದ್ದು,‌ಕರ್ನಾಟಕದ ವೀರ ವನಿತೆಯರಾದ, ರಾಣಿ ಚೆನ್ನಮ್ಮ, ಅಬ್ಬಕ್ಕರಂತಹ ಮಹಿಳಾ ಯೋಧರ ಕತೆಯನ್ನ ಶಾಸ್ತ್ರೀಯ ನೃತ್ಯದ ಮೂಲಕ ಪ್ರದರ್ಶನ ನೀಡಲಾಗುತ್ತದೆ.

ಬೆಳಿಗ್ಗೆ 10 ರಿಂದ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ  ನಗರದ ಕಲಾರ್ಪಣ ಕಲಾ‌ಕೇಂದ್ರದ ರೇಖಾ ಗೋರೆ ತಂಡ,ನೂಪುರ ನೃತ್ಯ ಶಾಲೆಯ ಅನುರಾಧ ಹೆಗಡೆ ತಂಡ, ಶಾರದೆ ನೃತ್ಯ ಶಾಲೆಯ ರಾಜಶ್ರೀ ನಾಯ್ಕ ತಂಡ,ನಾಟ್ಯಾಂಜಲಿ ನೃತ್ಯಕಲಾಕೇಂದ್ರದ ವಿನುತಾ ಹೆಗಡೆ ತಂಡ, ನಾಟ್ಯದೀಪ‌ದ ಸೀಮಾ ಭಾಗ್ವತ್ ತಂಡ, ಮೈತ್ರೇಯಿ ನೃತ್ಯಕಲಾ ಟ್ರಸ್ಟ್ ನ ಸೌಮ್ಯಾ ಹೆಗಡೆ ತಂಡದ ಕಲಾವಿದರು ಪ್ರದರ್ಶನವನ್ನು ನೀಡಲಿದ್ದಾರೆ.

300x250 AD

ಕಾರ್ಯಕ್ರಮಕ್ಕೆ  ರಾಷ್ಟ್ರೀಯ ಸ್ವಯಂಸೇವಕ ಸಂಘ ಸಾಮರಸ್ಯ ಸಹ ಸಂಯೋಜಕರು ಕರ್ನಾಟಕ ಉತ್ತರ ಪ್ರಾಂತ ಸೀತಾರಾಮ್ ಭಟ್ ಮುಖ್ಯ ಅಥಿತಿಯಾಗಿ ಆಗಮಿಸಲಿದ್ದು , ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಆಗಮಿಸಿ ಕಾರ್ಯಕ್ರಮವನ್ನ ಯಶಸ್ವಿಯಾಗಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

Share This
300x250 AD
300x250 AD
300x250 AD
Back to top