Slide
Slide
Slide
previous arrow
next arrow

ಜೆಡಿಎಸ್ ಪಕ್ಷಕ್ಕೆ 100ಕ್ಕೂ ಅಧಿಕ ಮಂದಿ ಕಾರ್ಯಕರ್ತರ ಸೇರ್ಪಡೆ

300x250 AD

ಮುಂಡಗೋಡ: ಪಟ್ಟಣ ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪೇ ಗೌಡ ಉದ್ಘಾಟಿಸಿ 100ಕ್ಕಿಂತ ಅಧಿಕ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾರ್ಯಪ್ರವತ್ತರಾಗಿ ಆಯಾ ತಾಲೂಕಿನಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಿಲ್ಲವೋ ಅಂತಹವನ್ನು ಕಲೆ ಹಾಕಿ ಪದಾಧಿಕಾರಿಗಳ ಆಯಾ ತಾಲೂಕಿನ ಅಧ್ಯಕ್ಷರು ಹೆಸರನ್ನು ಆಯ್ಕೆ ಮಾಡಿ ನಮಗೆ ಕಳಿಸಿಕೊಡಬೇಕು. ಅಲ್ಲದೆ ವಿವಿಧ ಶೆಲ್‌ಗಳ ಅಲ್ಪಸಂಖ್ಯಾತರ, ಎಸ್‌ಸಿ/ಎಸ್ಟಿ ಹಾಗೂ ಇನ್ನಿತರ ಶೆಲ್‌ಗಳ ಪದಾಧಿಕಾರಿಗಳ ಆಯ್ಕೆ ಮಾಡಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಅಧಿಕಾರಕ್ಕೆ ತಂದರೆ ಬಡವರ, ರೈತರ ಹಿಂದುಳಿದವರ ಕಲ್ಯಾಣವಾಗಿ ರಾಜ್ಯವು ಅಭಿವೃದ್ದಿ ಹೊಂದುತ್ತದೆ ಎಂದರು.
ಯಲ್ಲಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿತರಾಗಿರುವ ಸಂತೋಷ ರಾಯ್ಕರ್ (ಮಳಗಿ) ಮಾತನಾಡಿ ಕ್ಷೇತ್ರದಲ್ಲಿ ಪಕ್ಷವನ್ನು ಚೆನ್ನಾಗಿ ಸಂಘಟಿಸುತ್ತಿದ್ದೇವೆ. ಈ ಒಂದು ಸಲ ಜೆಡಿಎಸ್‌ಗೆ ಮತ ಹಾಕಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡುತ್ತೇವೆ ಎಂದರು. ಕ್ಷೇತ್ರದ ಅರಣ್ಯ ಅತಿಕ್ರಮಣ ಸಮಸ್ಯೆ ಹಾಗೇ ಉಳಿದಿದೆ. ಈಗಿರುವ ನಮ್ಮ ಕ್ಷೇತ್ರದ ಶಾಸಕರನ್ನು ಮುಂದಿನ ಚುನಾವಣೆಯಲ್ಲಿ ಗೆಲವು ಸಾಧಿಸದಂತೆ ನೋಡಿಕೊಳ್ಳೋಣ. ನಮ್ಮ ಪಕ್ಷದ ಅಭ್ಯರ್ಥಿ ಗೆಲವು ಸಾಧಿಸಿದರೆ ಹಿಂದುಳಿದ ಕ್ಷೇತ್ರವನ್ನು ಅಭಿವೃದ್ದಿ ಪಡಿಸುತ್ತೇವೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಾಫ ಮಿರ್ಜಾನಕರ ಮಾತನಾಡಿದರು. ಕ್ಷೇತ್ರಾಧ್ಯಕ್ಷ ಮುತ್ತು ಸಂಗೂರಮಠ, ತಾಲೂಕು ಅಧ್ಯಕ್ಷ ತುಕಾರಾಮ ಗುಡ್ಕರ, ಬಿನಿತ್ ಸಿದ್ದಿ, ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷರ ಮುಜಿಬ, ಸೇರಿದಂತೆ ಮುಂತಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top