Slide
Slide
Slide
previous arrow
next arrow

ಎಲೆಕ್ಟ್ರಿಕ್‌ ವಾಹನ ಖರೀದಿಗೆ ಬಂಪರ್‌ ರಿಯಾಯಿತಿ ಘೋಷಿಸಿದ ಯೋಗಿ ಸರ್ಕಾರ

300x250 AD

   

ಲಕ್ನೋ: ದೀಪಾವಳಿಯ ಕೆಲವೇ ದಿನಗಳ ಮೊದಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಎಲೆಕ್ಟ್ರಿಕ್‌ ವಾಹನ ಖರೀದಿಸಲು ಬಯಸುವವರಿಗೆ ಸಿಹಿ ಸುದ್ದಿ ನೀಡಿದೆ. EV ಖರೀದಿಗೆ ಸರ್ಕಾರ ದೊಡ್ಡ ರಿಯಾಯಿತಿಗಳನ್ನು ಘೋಷಿಸಿದೆ.

ವರದಿಗಳ ಪ್ರಕಾರ, ಯುಪಿ ಸರ್ಕಾರವು ದ್ವಿಚಕ್ರ ವಾಹನ EV ಖರೀದಿಸಲು ಕಾರ್ಖಾನೆ ವೆಚ್ಚದಲ್ಲಿ ಶೇಕಡಾ 15 ರಷ್ಟು ಸಬ್ಸಿಡಿಯನ್ನು ಘೋಷಿಸಿದ್ದು, ಮೊದಲ 2 ಲಕ್ಷ ಇವಿಗಳನ್ನು ಖರೀದಿಸಿದವರಿಗೆ ಪ್ರತಿ ವಾಹನಕ್ಕೆ ಗರಿಷ್ಠ 5,000 ರೂ ರಿಯಾಯಿತಿ ಸಿಗಲಿದೆ.ತ್ರಿಚಕ್ರ ವಾಹನ ಇವಿಗೆ ಗರಿಷ್ಠ 12,000 ರೂಗಳವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ, ಇದು ಖರೀದಿಸಿದ ಮೊದಲ 50,000 ವಾಹನಗಳಿಗೆ ಮಾತ್ರ ಅನ್ವಯ.

ಮೊದಲ 25,000 EVಗಳನ್ನು ಖರೀದಿಸಿದರೆ ನಾಲ್ಕು ಚಕ್ರಗಳ ಎಲೆಕ್ಟ್ರಿಕ್ ವಾಹನಕ್ಕೆ ರೂ 1 ಲಕ್ಷದವರೆಗೆ ರಿಯಾಯಿತಿ ಇರಲಿದೆ.  ಇ-ಬಸ್‌ಗೆ ರೂ 20 ಲಕ್ಷದವರೆಗೆ ರಿಯಾಯಿತಿ ಇರಲಿದೆ. ಮೊದಲ 400  ಇ-ಬಸ್‌ಗಳಿಗೆ ಮಾತ್ರ ಇದು ಅನ್ಚಯ.

300x250 AD

ಇವುಗಳ ಜೊತೆಗೆ, ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯದಲ್ಲಿ ಹೊಸ ಎಲೆಕ್ಟ್ರಿಕ್ ವಾಹನ ತಯಾರಿಕೆಗೆ ಮೂರು ಅಂಶಗಳ ನೀತಿಯನ್ನು ಪ್ರಕಟಿಸಿದೆ. ನೀತಿಯ ಮುಖ್ಯ ಉದ್ದೇಶವು ರಾಜ್ಯದಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ರಚಿಸುವುದು ಮಾತ್ರವಲ್ಲದೆ, ಉತ್ತರ ಪ್ರದೇಶವನ್ನು ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿಗಳು ಮತ್ತು ಸಂಬಂಧಿತ ಉಪಕರಣಗಳ ಉತ್ಪಾದನೆಗೆ ಜಾಗತಿಕ ಕೇಂದ್ರವನ್ನಾಗಿ ಮಾಡುವುದು.

ಕೃಪೆ:-http://news13.in

Share This
300x250 AD
300x250 AD
300x250 AD
Back to top