• Slide
    Slide
    Slide
    previous arrow
    next arrow
  • ಅಕಾಲಿಕ ಮರಣ ಹೊಂದಿದ ಮುಖ್ಯ ಕಾರ್ಯನಿರ್ವಾಹಕನ ಕುಟುಂಬಸ್ಥರಿಗೆ ಚೆಕ್‌ ವಿತರಿಸಿದ ಕೆಶಿನ್ಮನೆ

    300x250 AD

    ಶಿರಸಿ; ತಾಲೂಕಿನ ಅಗಸಾಲ ಬೊಮ್ಮನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕ ಭಾಸ್ಕರ ವೆಂಕಟ್ರಮಣ ಹೆಗಡೆ ಇವರು ಅ .10 ರಂದು ಅಕಾಲಿಕ ಮರಣ ಹೊಂದಿದ್ದಾರೆ. ಮೃತರ ಮರಣೋತ್ತರ ಕ್ರಿಯಾ ಕರ್ಮಗಳಿಗೆ ಸಹಾಯವಾಗುವಂತೆ ಮೃತರ ಕುಟುಂಬಸ್ಥರಿಗೆ ರೂ. 15,000/-, ಮೊತ್ತದ ಚೆಕ್‌’ನ್ನು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರು ಕಲ್ಯಾಣ ಸಂಘದ ವತಿಯಿಂದ ವಿತರಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾಸ್ಕರ ಹೆಗಡೆ ಅವರು ಕಳೆದ ಸುಮಾರು 15 ವರ್ಷಗಳಿಂದ ಅಗಸಾಲ ಬೊಮ್ಮನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಇತರೆ ಹಾಲು ಸಂಘಗಳ ಮುಖ್ಯಕಾರ್ಯನಿರ್ವಾಹಕರುಗಳಿಗೆ ಮಾದರಿಯಾಗಿದ್ದರು. ಸಂಘ ಹಾಗೂ ಈ ಭಾಗದ ಹಾಲು ಉತ್ಪಾದಕ ರೈತರ ಬೆಳವಣಿಗೆಯಲ್ಲಿ ಅವರ ಪಾತ್ರ ಬಹುಮುಖ್ಯವಾಗಿದ್ದು, ಅವರ ಸಲ್ಲಿಸಿದ ಸೇವೆಯನ್ನು ನಾವೆಲ್ಲರೂ ಸದಾ ಸ್ಮರಿಸುತ್ತೇವೆ ಎಂದರು.
    ಒಕ್ಕೂಟದ ಕಲ್ಯಾಣ ಸಂಘದಿಂದ ಈ ಮೊದಲು ನಮ್ಮ ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಯಾವುದೇ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರು ಮರಣ ಹೊಂದಿದರೆ ಅವರು ಮರಣ ಹೊಂದಿದ 15 ದಿನಗಳಲ್ಲಿ ಚೆಕ್‌ನ್ನು ಮೃತರ ಕುಟುಂಬಕ್ಕೆ ನೀಡಲಾಗುತ್ತಿತ್ತು, ಆದರೆ ಇದೇ ಮೊದಲ ಬಾರಿಗೆ ಮರಣ ಹೊಂದಿದ ಮುಖ್ಯಕಾರ್ಯನಿರ್ವಾಹಕರ ಮರಣೋತ್ತರ ಕ್ರಿಯಾ ಕರ್ಮಗಳಿಗಾಗಿ ಸಹಾಯವಾಗುವಂತೆ ಮೃತರ ಕುಟುಂಬಸ್ಥರಿಗೆ ಮರಣ ಹೊಂದಿದ 24 ಘಂಟೆಯ ಒಳಗೇ ಸಹಾಯ ಧನದ ಚೆಕ್‌’ನ್ನು ವಿತರಿಸಲಾಗಿದೆ ಎಂದರು. ಭಾಸ್ಕರ ಹೆಗಡೆ ಅವರು ಸಲ್ಲಿಸಿದ ಅವಿಸ್ಮರಣೀಯ ಸೇವೆಗೆ ಒಕ್ಕೂಟದಿಂದ ಮುಂದಿನ ದಿನಗಳಲ್ಲಿ ಇಡಿಗಂಟು ಹಣವನ್ನು ಸಹ ನೀಡಲಾಗುವುದು ಹಾಗೂ ಭಾಸ್ಕರ ಹೆಗಡೆ ಕುಟುಂಬಸ್ಥರಿಗೆ ದುಖಃವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

    300x250 AD

    ಈ ಸಂದರ್ಭದಲ್ಲಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉತ್ತರಕನ್ನಡ ಜಿಲ್ಲೆಯ ಶೇಖರಣೆ ಮತ್ತು ತಾಂತ್ರಿಕ ವಿಭಾಗ ಹಾಗೂ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್‌, ಶಿರಸಿ ಉಪವಿಭಾಗದ ಗುರುದರ್ಶನ ಭಟ್‌, ವಿಸ್ತರಣಾ ಸಮಾಲೋಚಕ ಅಭಿಷೇಕ ನಾಯ್ಕ, ಅಗಸಾಲ ಬೊಮ್ಮನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ನರಸಿಂಹ ಹೆಗಡೆ, ಭೈರುಂಬೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರಾದ ಮಂಜುನಾಥ ಎನ್‌ ಹೆಗಡೆ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top