• Slide
    Slide
    Slide
    previous arrow
    next arrow
  • ಕ್ರಿಯಾಶೀಲ ಗೆಳೆಯರ ಸಂಘದ ನೂತನ ಅಧ್ಯಕ್ಷರಾಗಿ ದೀಪಕ ನಾಯ್ಕ ಆಯ್ಕೆ

    300x250 AD

    ಭಟ್ಕಳ: ಇಲ್ಲಿನ ಕ್ರಿಯಾಶೀಲ ಗೆಳೆಯರ ಸಂಘದ ನೂತನ ಅಧ್ಯಕ್ಷರಾಗಿ ದೀಪಕ ನಾಯ್ಕ ಮುರುಡೇಶ್ವರ ಆಯ್ಕೆಯಾಗಿದ್ದಾರೆ.

    ಇತ್ತೀಚಿಗೆ ಸಂಘದ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ ನಾಯ್ಕ ನೂತನ ಅಧ್ಯಕ್ಷ ದೀಪಕ ನಾಯ್ಕ ಅವರಿಗೆ ಅಧಿಕಾರ ಹಸ್ತಾಂತರ ನಡೆಸಿದರು. ಉಪಾಧ್ಯಕ್ಷರಾಗಿ ರಾಘವೇಂದ್ರ ಶೇಟ್, ಪ್ರಧಾನ ಕಾರ್ಯದರ್ಶಿಯಾಗಿ ಪಾಂಡುರಂಗ ನಾಯ್ಕ ಕೋಗ್ತಿ, ಸಹ ಕಾರ್ಯದರ್ಶಿಯಾಗಿ ಅರುಣ್‌ಕುಮಾರ, ಖಜಾಂಚಿಯಾಗಿ ಭವಾನಿಶಂಕರ ಆಯ್ಕೆಯಾಗಿದ್ದಾರೆ.

    ನೂತನವಾಗಿ ಆಯ್ಕೆಗೊಂಡ ಸಂಘದ ಅಧ್ಯಕ್ಷ ದೀಪಕ ನಾಯ್ಕ ಮಾತನಾಡಿ, ಕಳೆದ ಹಲವು ವರ್ಷಗಳಿಂದ ನಮ್ಮ ಸಂಘವು ತಾಲೂಕಿನಲ್ಲಿ ಆರೋಗ್ಯ ಶಿಬಿರ, ಸ್ಚಚ್ಚತಾ ಕಾರ್ಯಕ್ರಮ, ಜನಜಾಗೃತಿ ಕಾರ್ಯಕ್ರಮ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ಮುಂದೆಯೂ ಸಹ ಸಮಾಜಮುಖಿ ಕಾರ್ಯಕ್ರಮ ನಡೆಸಲು ಎಲ್ಲ ಸದಸ್ಯರ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.

    300x250 AD

    ಆಯ್ಕೆ ಸಂದರ್ಭದಲ್ಲಿ ಸಂಘದ ಮಾಜಿ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಸದಸ್ಯರಾದ ವೆಂಕಟೇಶ ಮೊಗೇರ, ವಿನಾಯಕ ನಾಯ್ಕ, ಪಾಂಡು ನಾಯ್ಕ, ಪವನಕುಮಾರ,ಅಣ್ಣಪ್ಪ ನಾಯ್ಕ, ಈಶ್ವರ ನಾಯ್ಕ, ಜಗದೀಶ ನಾಯ್ಕ, ಮನಮೋಹನ ನಾಯ್ಕ, ಈಶ್ವರ ಎನ್. ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top