Slide
Slide
Slide
previous arrow
next arrow

ವಿಶ್ವದರ್ಶನ ಪಿಯು ಕಾಲೇಜಿನಲ್ಲಿ ವನ್ಯಜೀವ ಸಪ್ತಾಹ: ಚಿತ್ರಕಲಾ ಸ್ಪರ್ಧೆ

300x250 AD

ಯಲ್ಲಾಪುರ: ಅರಣ್ಯ ಇಲಾಖೆ ಸಹಯೋಗದಲ್ಲಿ 68ನೇ ವನ್ಯ ಜೀವ ಸಪ್ತಾಹ-2022ರ ಅಂಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿತ್ತು.

ಈ ಸ್ಪರ್ಧೆಯಲ್ಲಿ ಸಂಸ್ಥೆಯ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣೆಯನ್ನು ಎಪಿಎಂಸಿ ಎದುರಿನ ಟ್ರೀ ಪಾರ್ಕಲ್ಲಿ ಆಯೋಜಿಸಲಾಗಿತ್ತು. ಸಂಸ್ಥೆಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಣವ್ ಭಟ್ ಪ್ರಥಮ ಸ್ಥಾನ, ಪವಿತ್ರ ಭಟ್ ದ್ವಿತೀಯ ಸ್ಥಾನ ಹಾಗೂ ಸಾಕ್ಷಿ ಖಾನಾಪುರ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

300x250 AD

ಈ ಸಂದರ್ಭದಲ್ಲಿ ಡಿಆರ್‌ಎಫ್‌ಓ ಸಂಜಯಕುಮಾರ ಹಾಗೂ ಅರಣ್ಯ ರಕ್ಷಕ ಕಾಶೀನಾಥ ಯಾಕಂಚಿ ಇದ್ದರು. ಸಂಸ್ಥೆಯ ಪರವಾಗಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ದತ್ತಾತ್ರೇಯ ಗಾಂವ್ಕರ್, ಉಪನ್ಯಾಸಕಿ ವಂದನಾ ಗುಮ್ಮಾನಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅದ್ಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Share This
300x250 AD
300x250 AD
300x250 AD
Back to top