Slide
Slide
Slide
previous arrow
next arrow

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಶಾಸಕಿ ರೂಪಾಲಿ

300x250 AD

ಕಾರವಾರ: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಸೋಮವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಶಾಸಕಿ ರೂಪಾಲಿ ಎಸ್.ನಾಯ್ಕ, ಜನತೆ ಎದುರಿಸುತ್ತಿದ್ದ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.

ಪ್ರವಾಹದಿಂದ ಕುಸಿದ ಮನೆಯ ಸಮೀಕ್ಷೆ ವರದಿ ತಪ್ಪಾಗಿದೆ ಎನ್ನುವುದನ್ನು ಸಂತ್ರಸ್ತರು ಶಾಸಕರ ಗಮನಕ್ಕೆ ತಂದಾಗ, ಪ್ರವಾಹಕ್ಕೆ ಸಿಲುಕಿ ಕುಸಿದ ಮನೆಗಳ ಸಮೀಕ್ಷೆ ನಡೆಸುವಾಗ ಸಂತ್ರಸ್ತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸಂಪೂರ್ಣ ಮನೆ ಕುಸಿದರೆ ಶೇ.100ರಷ್ಟು ಹಾನಿ ಎಂದೇ ನಮೂದಿಸಬೇಕು. ಸಂಪೂರ್ಣ ಮನೆ ಕುಸಿದಿದ್ದರೂ ಶೇ 87ರಷ್ಟು ಮಾತ್ರ ಹಾನಿ ಎಂದು ನಮೂದಿಸಿದ ಅಧಿಕಾರಿಗಳ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಮನೆ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ನೀಡುತ್ತದೆ. ಆದರೆ ತಪ್ಪು ತಪ್ಪಾದ ವರದಿಯಿಂದ ಸಂತ್ರಸ್ತರು ಕಚೇರಿಗಳಿಗೆ ಅಲೆದಾಡುವಂತಾಗುತ್ತದೆ. ಯಾವುದೇ ಕಾರಣಕ್ಕೂ ಸಂತ್ರಸ್ತರಿಗೆ ತೊಂದರೆ ಆಗಬಾರದು ಎಂದು ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.

ನಗರದ 31 ವಾರ್ಡುಗಳ ತ್ಯಾಜ್ಯವನ್ನು ಶಿರವಾಡಕ್ಕೆ ತಂದು ಹಾಕುವುದರಿಂದ ಅಲ್ಲಿನ ಜನತೆ ಸಮಸ್ಯೆಗೀಡಾಗಿದ್ದಾರೆ. ಆದರೆ ಶಿರವಾಡ ಜನತೆಗೆ ಯಾವುದೆ ಕೊಡುಗೆ ನೀಡಿಲ್ಲ. ಶಿರವಾಡ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡುವಂತಾಗಬೇಕು ಎಂದು ಶಿರವಾಡದ ಜನತೆ ಗಮನಕ್ಕೆ ತಂದಾಗ, ಶಿರವಾಡದಲ್ಲಿ ತ್ಯಾಜ್ಯ ವಿಲೇವಾರಿ ಘಟಕ, ಅತಿಕ್ರಮಣದಾರರ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಈ ಬಗ್ಗೆ ವಿಶೇಷ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ರೂಪಾಲಿ ಎಸ್.ನಾಯ್ಕ ತಿಳಿಸಿದರು.

ನಿವೇಶನ ರಹಿತರಿಗೆ ಮನೆ ನಿರ್ಮಾಣದ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ. ಈ ಸಮಸ್ಯೆಯನ್ನು ಆದಷ್ಟು ಶೀಘ್ರದಲ್ಲಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಗೋಟೆಗಾಳಿಯಲ್ಲಿ ಪಡಿತರಕ್ಕಾಗಿ ಜನರು 15 ಕಿ.ಮೀ. ನಡೆಯುವಂತಾಗಿದೆ. ಒಂದು ವಾರದಲ್ಲಿ ಅಲ್ಲಿನ ಜನರಿಗೆ ಪಡಿತರ ವಿತರಣೆ ಆಗುವಂತೆ ಮಾಡಿ ಅಲೆದಾಟವನ್ನು ತಪ್ಪಿಸಬೇಕು ಎಂದು ಆದೇಶಿಸಿದರು.

ಪಡಿತರ ಚೀಟಿ ಸಮಸ್ಯೆ ಇದ್ದಲ್ಲಿ ಅದನ್ನು ಕೂಡಲೇ ಬಗೆಹರಿಸಬೇಕು. ಯಾವುದೆ ರೀತಿಯ ಆದಾಯ ಇಲ್ಲದವರಿಗೂ ಬಿಪಿಎಲ್ ಬದಲು ಎಪಿಎಲ್ ಕಾರ್ಡ ನೀಡಲಾಗಿದೆ. ಅಂತಹ ಪ್ರಕರಣ ಗಮನಿಸಿ ಅದನ್ನು ಬಗೆಹರಿಸಬೇಕು ಎಂದು ಸೂಚಿಸಿದರು. ಎಎನ್ ಎಂಗಳನ್ನು ಖಾಯಂ ಮಾಡದೆ ಇರುವುದನ್ನು ಗಮನಕ್ಕೆ ತಂದಾಗ ಮಂಗಳವಾರ ಕಾರವಾರಕ್ಕೆ ಆಗಮಿಸಲಿರುವ ಆರೋಗ್ಯ ಸಚಿವರಲ್ಲಿ ಈ ಬಗ್ಗೆ ಮನವಿ ಮಾಡುವುದಾಗಿ ಶಾಸಕರು ತಿಳಿಸಿದರು.

ಕಾರವಾರ, ಅಂಕೋಲಾ ವಿಧಾನಸಭಾ ಕ್ಷೇತ್ರದ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಅಧಿಕಾರಿಗಳು ಜನರ ಬಳಿಗೆ ಹೋಗಿ ಕೆಲಸ ಮಾಡಬೇಕು. ಅಧಿಕಾರಿಗಳು ಲಭ್ಯ ಇರುವ ದಿನದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕು. ಮಾನವೀಯತೆಯ ನೆಲೆಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ರೂಪಾಲಿ ಎಸ್.ನಾಯ್ಕ ಸೂಚಿಸಿದರು.

ತಹಶೀಲ್ದಾರ ನಿಶ್ಚಲ ನೊರೋನ್ನಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಆನಂದಕುಮಾರ್ ಬಾಲಪ್ಪನವರ್, ಪೌರಾಯುಕ್ತ ಆರ್.ಪಿ.ನಾಯ್ಕ, ಬಿಜೆಪಿ ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರ, ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಗುನಗಿ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top