• Slide
    Slide
    Slide
    previous arrow
    next arrow
  • ಶಿಕ್ಷಕಿ ಶಿವಲೀಲಾಗೆ ಶ್ರೀಗುರುಕುಲ ತಿಲಕ ಪುರಸ್ಕಾರ

    300x250 AD

    ಯಲ್ಲಾಪುರ: ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ಆಯೋಜಿಸಿದ್ದ ವಿಶ್ವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಅರಬೈಲ್ ಶಾಲೆಯ ಶಿಕ್ಷಕಿ, ಸಾಹಿತಿ, ಶಿವಲೀಲಾ ಹುಣಸಗಿ ಅವತಿಗೆ ಶ್ರೀ ಗುರುಕುಲ ತಿಲಕ ಪುರಸ್ಕಾರ ನೀಡಿ ಗೌರವಿಸಲಾಯಿತು.
    ಶಿವಲೀಲಾ ಅವರ ಶಿಕ್ಷಣ ಕ್ಷೇತ್ರ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಸಿ ಶ್ರೀ ಗುರುಕುಲ ತಿಲಕ ಪ್ರಶಸ್ತಿ ನೀಡಲಾಗಿದೆ. ಅರಬೈಲ್ ಶಾಲೆಯಲ್ಲಿ ಮುಖ್ಯಾಧ್ಯಾಪಕರಾಗಿರುವ ಶಿವಲೀಲಾ, ಕ್ರಿಯಾಶೀಲ ಶಿಕ್ಷಕರಾಗಿ, ಸಾಹಿತಿಯಾಗಿ, ವಿವಿಧ ಸಾಹಿತ್ಯಿಕ, ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಈ ಸೇವೆಗೆ ಪ್ರಶಸ್ತಿ ದೊರೆತಿದೆ.
    ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿಯ ಅಧ್ಯಕ್ಷ ಪ್ರೊ. ಎಲ್.ಎಚ್. ಪೆಂಡಾರಿ ಇವರು ಪ್ರಶಸ್ತಿ ಪ್ರದಾನ ಮಾಡಿದರು. ಡಾ. ರಾಧಾ ಕುಲಕರ್ಣಿ, ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶ ಗಜಾನನ ಮನ್ನಿಕೇರಿ, ಕೆಇಎ ಮುಖ್ಯಸ್ಥ ಸಿ.ಎಂ. ಬಂಡಗರ ಇತರರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top