• Slide
    Slide
    Slide
    previous arrow
    next arrow
  • ಪುನೀತ್ ಅಭಿನಯದ ಗಂಧದಗುಡಿ ಟ್ರೈಲರ್’ಗೆ ಪ್ರಧಾನಿ ಮೆಚ್ಚುಗೆ

    300x250 AD

    ಬೆಂಗಳೂರು: ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅಭಿನಯದ ಗಂಧದಗುಡಿ ಟ್ರೈಲರ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    ದಿವಂಗತ ಪುನೀತ್‌ ರಾಜ್‌ ಕುಮಾರ್‌ ಅವರ ಕನಸಿನ ಕೂಸಾಗಿದ್ದ ಗಂಧದ ಗುಡಿ ಸಾಕ್ಷ್ಯಚಿತ್ರದ ಟ್ರೈಲರ್‌ ರಿಲೀಸ್‌ ಆಗಿದ್ದು, ಇದನ್ನು ಪುನೀತ್‌ ಅವರ ಪತ್ನಿ ಅಶ್ವಿನಿ ಮೋದಿಗೆ ಟ್ಯಾಗ್‌ ಮಾಡಿ, “ಅಪ್ಪು ಅವರ ಹೃದಯಕ್ಕೆ ಹತ್ತಿರವಾದ ಪ್ರಾಜೆಕ್ಟ್ ಗಂಧದಗುಡಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತಿರುವ ಇಂದು ನಮಗೆ ಭಾವನಾತ್ಮಕ ದಿನ. ಅಪ್ಪು ಸದಾ ನಿಮ್ಮೊಂದಿಗಿನ ಸಂವಾದಗಳನ್ನು ಆನಂದಿಸುತ್ತಿದ್ದರು ಮತ್ತು ನಿಮ್ಮೊಂದಿಗೆ ವೈಯಕ್ತಿಕವಾಗಿ ಹಂಚಿಕೊಳ್ಳಲು ಇಷ್ಟಪಡುತ್ತಿದ್ದರು” ಎಂದಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೋದಿ, “ಅಪ್ಪು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅವರು ತೇಜಸ್ವಿ ವ್ಯಕ್ತಿಯಾಗಿದ್ದರು, ಕ್ರಿಯಾಶೀಲರಾಗಿದ್ದರು ಮತ್ತು ಅಪ್ರತಿಮ ಪ್ರತಿಭೆಯಿಂದ ಆಶೀರ್ವದಿತರಾಗಿದ್ದರು. ಗಂಧದಗುಡಿ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯಕ್ಕೆ ಮತ್ತು ಪರಿಸರ ಸಂರಕ್ಷಣೆಗೆ ಗೌರವವಾಗಿದೆ. ಈ ಪ್ರಯತ್ನಕ್ಕೆ ನನ್ನ ಶುಭಾಶಯಗಳು” ಎಂದು ಮೋದಿ ಟ್ವಿಟ್‌ ಮಾಡಿದ್ದಾರೆ.

    300x250 AD

    https://twitter.com/narendramodi/status/1578982813579489281?ref_src=twsrc%5Etfw%7Ctwcamp%5Etweetembed%7Ctwterm%5E1578982813579489281%7Ctwgr%5E1d1353e29378cfda1e41f25d7792fead21cef516%7Ctwcon%5Es1_&ref_url=https%3A%2F%2Fnews13.in%2Farchives%2F218128

    Share This
    300x250 AD
    300x250 AD
    300x250 AD
    Leaderboard Ad
    Back to top