ಶಿರಸಿ: ರಾಮಾಯಣದ ರಚನಾಕಾರ ವಾಲ್ಮೀಕಿ ಮಹರ್ಷಿಗಳ ಜಯಂತ್ಯೋತ್ಸವವನ್ನು ನಾವಿಂದು ಆಚರಿಸುತ್ತಿದ್ದೇವೆ. ವಾಲ್ಮೀಕಿ ಅವರು ಒಬ್ಬ ಸಾಹಿತಿಯಾಗಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇಂದು ನಾವು ಸಮಾಜದಲ್ಲಿ ಜಾತಿ ಭೇದವನ್ನು ನೋಡುತ್ತೇವೆ. ವಾಲ್ಮೀಕಿ ಎಲ್ಲರೂ ಸಮಾನರು ಎನ್ನುವ ಭಾವವನ್ನು ಸಮಾಜಕ್ಕೆ ಪಸರಿಸಿದವರು. ಶ್ರೇಷ್ಠತೆ ಜಾತಿಯ ಒಳಗಿಲ್ಲ ನಮ್ಮ ಯೋಚನೆ, ನಮ್ಮ ಸಾಮರ್ಥ್ಯ, ನಮ್ಮ ಸಾಧನೆಯಲ್ಲಿದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಟಿ ಎಸ್ ಹಳೆಮನೆ ಹೇಳಿದರು.
ಅವರು ವಾಲ್ಮೀಕಿ ಜಯಂತಿಯ ಅಂಗವಾಗಿ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾಲ್ಮೀಕಿ ಮಹರ್ಷಿಯ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು.
ಜಗತ್ತಿನಲ್ಲಿ ಜ್ಞಾನ ಶ್ರೇಷ್ಠವಾದಂತಹ ಸ್ಥಾನವನ್ನು ಹೊಂದಿದೆ. ಹಾಗೆಯೇ ಧನಾತ್ಮಕ ಯೋಚನೆ ಮತ್ತು ಕಾರ್ಯಗಳು ಕೂಡ ಉತ್ತಮವಾದ ಸ್ಥಾನವನ್ನು ನಮಗೆ ನೀಡುತ್ತದೆ. ಹಾಗಾಗಿ ವಾಲ್ಮೀಕಿ ಅವರ ಜೀವನ ಜೀವನ ಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಐಕ್ಯೂ ಎಸಿ ಸಂಚಾಲಕ ಡಾ. ಎಸ್ ಎಸ್ ಭಟ್, ಪ್ರಾಧ್ಯಾಪಕರುಗಳು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.