Slide
Slide
Slide
previous arrow
next arrow

ದಿನೇಶ್ ಪಡ್ತಿ ನಿಧನಕ್ಕೆ ಮಾಧವ ನಾಯಕ ಕಂಬನಿ

300x250 AD

ಕಾರವಾರ: ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಗ್ರಾಮೀಣ ಘಟಕದ ಅಧ್ಯಕ್ಷರಾಗಿದ್ದ ದಿನೇಶ್ ಪಡ್ತಿ ಅವರ ನಿಧನಕ್ಕೆ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಮತ್ತು ಸರ್ವ ಸದಸ್ಯರು ಸಂತಾಪ ಸೂಚಿಸಿದ್ದಾರೆ.

ದಿನೇಶ್ ಪಡ್ತಿಯವರು ಉತ್ತಮ ಗುತ್ತಿಗೆದಾರರಾಗಿ ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಗುತ್ತಿಗೆದಾರರ ಸಂಘದ ಗ್ರಾಮೀಣ ಘಟಕದ ಅಧ್ಯಕ್ಷರಾಗಿ ಗ್ರಾಮೀಣ ಭಾಗದಲ್ಲಿ ಗುತ್ತಿಗೆದಾರರ ಸಮಸ್ಯೆಗಳನ್ನು ಪರಿಹರಿಸಲು ಗಮನ ನೀಡುತ್ತಿದ್ದರು,ಅವರು ಧಾರವಾಡ ದಲ್ಲಿ ನಡೆದ ಗುತ್ತಿಗೆದಾರರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಅವರನ್ನು ನಾವಿಂದು ಕಳೆದುಕೊಂಡಿರುವುದು ಬಹಳ ನೋವು ತಂದಿದೆ ಎಂದಿದ್ದಾರೆ.

300x250 AD

ಗುತ್ತಿಗೆದಾರರರೊಬ್ಬರನ್ನ, ಅದರಲ್ಲೂ ಗ್ರಾಮೀಣ ಘಟಕದ ಅಧ್ಯಕ್ಷರಾಗಿದ್ದ ದಿನೇಶ್ ನಮ್ಮನ್ನ ಅಗಲಿರುವುದು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ಅತೀವ ದುಃಖ ತಂದಿದೆ. ಅವರು ಪತ್ನಿ, ಮಗ, ಮಗಳು, ಮತ್ತು ಮೂರು ಜನ ಸಹೋದರರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ, ಗ್ರಾಮೀಣ ಭಾಗದ ಗುತ್ತಿಗೆದಾರರ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top