• Slide
    Slide
    Slide
    previous arrow
    next arrow
  • ನಾಗರಿಕ ಬಂದೂಕು ತರಬೇತಿ: ಸಂಪೂರ್ಣ ಮಾಹಿತಿ ಇಲ್ಲಿದೆ

    300x250 AD

    ಶಿರಸಿ: ಅಧಿಕಾರಿಗಳ ಆದೇಶದಂತೆ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಾಗರಿಕ ಬಂದೂಕು ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತದೆ. ತರಬೇತಿಯು 3 ದಿವಸ ಬಂದೂಕು ತರಬೇತಿ,1 ದಿವಸ ಗುಂಡು ಗುರಿ ಅಭ್ಯಾಸ ( firing practice )ವನ್ನು ಒಳಗೊಂಡಿರುತ್ತದೆ.

    ತರಬೇತಿಗಾಗಿ ಅರ್ಜಿ ಸಲ್ಲಿಸಲು ಅ.10 ಕೊನೆಯ ದಿನವಾಗಿದ್ದು ಶಿರಸಿ ತಾಲೂಕಿನ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಅರ್ಜಿ ನಮೂನೆ ಲಭ್ಯವಿರುತ್ತದೆ.

    ತರಬೇತಿ ಪಡೆಯಲಿಚ್ಚಿಸುವ ನಾಗರಿಕರಿಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ;.

    1) ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಅರ್ಜಿಯನ್ನು ಸಲ್ಲಿಸುವುದು.

    2) ಅರ್ಜಿದಾರರು ಸ್ಪಷ್ಟವಾಗಿ ಹಾಲಿ ಹಾಗೂ ಖಾಯಂ ವಿಳಾಸವನ್ನು ನಮೂದಿಸುವುದು.

    300x250 AD

    3) ಆಧಾರ್ ಕಾರ್ಡ್ ನಕಲು ಪ್ರತಿ ಹಾಗೂ 4 ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಸಲ್ಲಿಸುವುದು.

    4) ತರಬೇತಿಗೆ ನೀಡುವ ಮದ್ದು ಗುಂಡುಗಳ ಮೊತ್ತವನ್ನು ಅರ್ಜಿದಾರರೇ ಭರಿಸತಕ್ಕದ್ದು.

    5) ತರಬೇತಿ ಪಡೆಯಲಿಚ್ಚಿಸುವವರು ನಿಗದಿಪಡಿಸಿದ ವೇಳಾಪಟ್ಟಿಯಂತೆ ಕಡ್ಡಾಯವಾಗಿ ತರಬೇತಿಗೆ ಹಾಜರಾದಲ್ಲಿ ಮಾತ್ರ ಪ್ರಮಾಣ ಪತ್ರವನ್ನು ಪೂರೈಸಲಾಗುವುದು. ತರಬೇತಿಗೆ ಗೈರು ಹಾಜರಾದವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದಿಲ್ಲ.

    6) ತರಬೇತಿ ಪಡೆಯಲಿಚ್ಚಿಸುವ ಶಿರಸಿ ತಾಲೂಕಿನ ನಾಗರಿಕರುಗಳು ತಮ್ಮ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಾದ ನಗರ ಠಾಣೆ,ಹೊಸ ಮಾರುಕಟ್ಟೆ ಠಾಣೆ, ಗ್ರಾಮೀಣ ಠಾಣೆ,ಬನವಾಸಿ ಠಾಣೆ ಗಳಲ್ಲಿ ಅ. 10ರ ಒಳಗಾಗಿ ಅರ್ಜಿಯನ್ನ ಸಲ್ಲಿಸುವುದು.

    Share This
    300x250 AD
    300x250 AD
    300x250 AD
    Leaderboard Ad
    Back to top