Slide
Slide
Slide
previous arrow
next arrow

ಪ್ರಕರಣ ಮುಗಿಯುವವರೆಗೂ ಜಮೀನಿನ ಗಡಿ ಗುರುತಿಸದಂತೆ ಮನವಿ ಸಲ್ಲಿಕೆ

300x250 AD

ಕಾರವಾರ: ಹಳಿಯಾಳ ತಾಲೂಕಿನ ಸಾಂಬ್ರಾಣಿ ಹೋಬಳಿಯ ಕಾಳಗಿನಕೊಪ್ಪದ ಕೃಷಿ ಜಮೀನಿನ ಗಡಿ ಗುರುತಿಸುವ ಕುರಿತು ನ್ಯಾಯಾಲಯಕ್ಕೆ ಮೆಲ್ಮನವಿ ಸಲ್ಲಿಸಲಾಗಿದೆ. ಪ್ರಕರಣ ಮುಗಿಯುವವರೆಗೂ ಜಿಲ್ಲಾಡಳಿತ ಜಮೀನಿನ ಗಡಿ ಗುರುತಿಸಬಾರದು ಎಂದು ಹಳಿಯಾಳದ ಕಾಳಗಿನಕೊಪ್ಪದ ಗ್ರಾಮದ ರೈತರು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಿದರು.

ಕಾಳಗಿನಕೊಪ್ಪ ಜಮೀನಿನಲ್ಲಿ ಹಲವಾರು ತಲೆಮಾರುಗಳಿಂದ ವ್ಯವಸಾಯ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಕೆಲವರು ಉಚ್ಛ ನ್ಯಾಯಾಲಯ ಧಾರವಾಡ ಪೀಠಕ್ಕೆ ಸುಳ್ಳು ಮಾಹಿತಿ ನೀಡಿ ತಾವು ಮಾಡುತ್ತಿರುವ ಜಮೀನನ್ನು ಅವರಿಗೆ ನೀಡಲು ಆದೇಶ ತಂದಿದ್ದಾರೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದು, ತೀರ್ಪು ಬರುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದರು.

ಸರಕಾರದಿಂದ ಮಂಜೂರಾದ ಜಮೀನಾಗಿದ್ದು, ಇದರಲ್ಲಿ ತಲೆಮಾರಿನಿಂದ ವ್ಯವಸಾಯ ಮಾಡಿಕೊಂಡು ಬರಲಾಗುತ್ತಿದೆ. ಆದರೆ ತಮ್ಮ ವಶಕ್ಕೆ ಪಡೆಯಲು ಹೊರಟವರು ಕೇವಲ ಸರಕಾರದ ಅಧಿಕಾರಿಗಳನ್ನು ಮಾತ್ರ ಪಾರ್ಟಿಯನ್ನಾಗಿ ಮಾಡಿ ಧಾರವಾಡದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವ್ಯವಸಾಯ ಮಾಡಿಕೊಂಡು ಬರುತ್ತಿರುವವರನ್ನು ಪಾರ್ಟಿಯನ್ನಾಗಿ ಮಾಡಿರಲಿಲ್ಲ. ವಿಚಾರಣೆ ನಡೆಸಿದ ನ್ಯಾಯಾಲಯ ಅವರ ಪರ ತೀರ್ಪು ನೀಡಿದೆ ಎಂದು ಹೇಳಿದರು.

300x250 AD

ತಮ್ಮ ಜಮೀನನ್ನು ಪಡೆಯಲು ನ್ಯಾಯಾಲಯಕ್ಕೆ ಹೋದವರು ಸುಳ್ಳು ಮಾಹಿತಿ ಕೊಟ್ಟು ಕಬ್ಜಾದ ಆದೇಶವನ್ನು ತಂದಿದ್ದಾರೆ. ಇದನ್ನು ಪ್ರಶ್ನಿಸಿ ವ್ಯವಸಾಯ ಮಾಡುತ್ತಿರುವ ನಾವು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಹಾಕಿದ್ದೇವೆ ಎಂದ ಅವರು, ಹಲವಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದ ನಮಗೆ ಅನ್ಯಾಯ ಆಗುತ್ತದೆ. ಈ ಹಿಂದೆ ಹಳಿಯಾಳದ ಹಲವರು ವಕೀಲರೊಂದಿಗೆ ಬಂದು ಜಮೀನಿನ ಗಡಿ ಗುರುತಿಸಿ ಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯದ ಆದೇಶದ ಬಳಿಕ ನಾವು ನಮ್ಮ ಜಮೀನನ್ನು ಉಳಿಸಿಕೊಳ್ಳಲು ಮೆಲ್ಮನವಿ ಸಲ್ಲಿಸಿದ್ದೇವೆ. ಹೀಗಾಗಿ ನ್ಯಾಯಾಲಯದ ಆದೇಶ ಬರುವವರೆಗೆ ಜಮೀನಿನ ಅಳತೆ ಅಥವಾ ಗಡಿ ಗುರುತು ಮಾಡಬಾರದು ಎಂದು ಅಆಗ್ರಹಿಸಿದ್ದಾರೆ.

ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ವ್ಯವಸಾಯ ಮಾಡುತ್ತಿರುವ ಸುಭಾಸ ಬೊಗುರಕರ, ಪರಶುರಾಮ ಶಿವನಗೌಡ, ಶ್ರೀಪಾದ ದೇವರಮನೆ, ಕಸ್ತೂರಿ ಮೇಟಿ, ಮಂಜುನಾಥ ಚೌಗುಲೆ, ಪಾಂಡುರಂಗ ಮಿರಾಶಿ ಮುಂದಾದವರು ಮನವಿ ನೀಡುವ ವೇಳೆ ಇದ್ದರು.

Share This
300x250 AD
300x250 AD
300x250 AD
Back to top