ಹೊನ್ನಾವರ: ಪರೇಶ ಮೇಸ್ತ ಪ್ರಕರಣ ಮುಂದಿಟ್ಟು ಜಿಲ್ಲೆಯ ಅಶಾಂತಿಗೆ ಕಾರಣವಾಗಿದ್ದ ಬಿಜೆಪಿ ಇದೀಗ ಜನತೆಯ ಮುಂದೆ ಬೇಷರತ್ ಕ್ಷಮೆ ಯಾಚಿಸಲಿ ಎಂದು ಕೆಪಿಸಿಸಿ ಸೇವಾದಳ ಯಂಗ್ ಬ್ರಿಗೇಡ್ ಜಿಲ್ಲಾಧ್ಯಕ್ಷ ಅಕ್ಷಯ ನಾಯ್ಕ ಒತ್ತಾಯಿಸಿದ್ದಾರೆ.
ಕೋಮು ಪ್ರಚೋದನೆಯ ಮೂಲಕ ಸದಾ ಅಧಿಕಾರದ ಲಾಭ ಪಡೆಯುವ ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಹೊನ್ನಾವರದ ಮೀನುಗಾರ ಕುಟುಂಬದ ಪರೇಶ ಮೇಸ್ತ ಪ್ರಕರಣದ ವೈಷಮ್ಯ ಮುಂದಿಟ್ಟು, ಮತಗಳಿಸಿ ಅಧಿಕಾರ ಪಡೆದರು. ಗೆದ್ದ ನಂತರ ಪರೇಶ ಪ್ರಕರಣ ಸಂಪೂರ್ಣ ಮರೆತರು. ಎಷ್ಟರಮಟ್ಟಿಗೆ ಮರೆತರು ಎಂದರೆ, ವರ್ಷಕ್ಕೊಮ್ಮೆ ನಡೆಯುವ ಸಂತಾಪ ಸಭೆಗೂ ಶಾಸಕರಾದಿ ಬಿಜೆಪಿ ಪ್ರಮುಖ ಮುಖಂಡರು ಹೋಗದೇ ತಮ್ಮ ರಾಜಕೀಯ ಲಾಭಗಳಿಸಿ ಅಧಿಕಾರದ ಕುರ್ಚಿಯಲ್ಲಿ ಕುಳಿತು ಯುವಕರ ರಕ್ತದ ಕಲೆ ಅಂಟಿಕೊಂಡರು ಅಂದರೆ ತಪ್ಪಾಗಲಾರದು ಎಂದಿದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಸಿಬಿಐ ಮೇಸ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ರಿರ್ಪೋಟ್ ನೀಡಿದೆ. ಆಗ ಅಬ್ಬರಿಸಿ ಬೊಬ್ಬೆರದ ಬಿಜೆಪಿಯವರು ಈಗ ಏನು ಮಾಡುತ್ತಿದ್ದಾರೆ. ಅಂದು ಸಾರ್ವಜನಿಕ ಆಸ್ತಿಪಾಸ್ತಿಗೆ ಆದ ಹಾನಿ ಮತ್ತು ಜಿಲ್ಲೆಯ ವಿವಿಧಡೆ ನಡೆದ ಕೋಮು ಗಲಭೆ ಮುಗ್ದ ಯುವಕರನ್ನು ಪ್ರೇರೇಪಿಸಿ ದಾಂಧಲೆ ನಡೆಸಿ ಪ್ರಕರಣ ದಾಖಲಾಗಲು ಬಿಜೆಪಿ ನಾಯಕರೆ ನೇರ ಕಾರಣ. ಈ ಪ್ರಕರಣದಿಂದ ಗದ್ದುಗೆ ಏರಿ ಅಧಿಕಾರದ ಅಮಲಿನಲ್ಲಿರುವ ಬಿಜೆಪಿಯ ಶಾಸಕರಾಧಿ ಸಚೀವರು ಮುಖಂಡರು ಸಾರ್ವಜನಿಕವಾಗಿ ಕ್ಷಮೆ ಕೇಳಲಿ. ರಾಜಕೀಯವಾಗಿ ಆ ಕುಟುಂಬವನ್ನು ಬಳಸಿ ಲಾಭ ಪಡೆದು ಬಿಜೆಪಿಯಿಂದ ಆಯ್ಕೆಯಾದ ಶಾಸಕರು ಮತ್ತು ಸಚಿವರು ಹಾಗೂ ಸಂಸದರು ಪರೇಶ ಸಹೋದರನಿಗೆ ಉದ್ಯೋಗ ನೀಡಲಿ ಎಂದು ಆಗ್ರಹಿಸಿದ್ದಾರೆ.