• Slide
    Slide
    Slide
    previous arrow
    next arrow
  • ವ್ಯಕ್ತಿಯನ್ನು ಸುಲಿಗೆ ಮಾಡಿದ್ದ ಖದೀಮರ ಬಂಧನ

    300x250 AD

    ಶಿರಸಿ: ತಾಲೂಕಿನ ಅಮ್ಮೀನಳ್ಳಿ ಸಮೀಪದ ಹಣಗಾರ ಬಳಿ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೇವಲ 6 ಗಂಟೆಗಳಲ್ಲಿ ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ.‌
    ಅಮ್ಮಿನಳ್ಳಿಯ ಜನತಾ ಕಾಲೋನಿಯ ಮಹಮ್ಮದ್ ಇಸಾಕ್ ಅಬ್ದುಲ್ಲಾ ವಹಾಬ್ ಶೇಖ್ (23) ಹಾಗೂ ಮತ್ತಿಗಾರಿನ ಪ್ರವೀಣ ಮಾರುತಿ ಅಲಗೇರಿಕರ್ (23) ಬಂಧಿತರು. ಅ.5 ರಂದು ಅಮ್ಮೀನಳ್ಳಿಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ, ದೂರುದಾರ ಶ್ರೀಪಾದ ದೇವರು ಹೆಗಡೆ ಎಂಬ ವ್ಯಕ್ತಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹಣಗಾರ ಕ್ರಾಸ್ ಸಮೀಪ ಇಬ್ಬರು ಆರೋಪಿಗಳು ಮೋಟರ ಸೈಕಲ್ ಮೇಲೆ ಬಂದು ಶ್ರೀಪಾದ ಹೆಗಡೆ ಸ್ಕೂಟಿಯನ್ನು ಅಡ್ಡಗಟ್ಟಿ ನಿಲ್ಲಿಸಿ ಸ್ಕೂಟಿಯ ಮುಂಬಾಗದಲ್ಲಿದ್ದ ಕ್ಯಾಶ್‍ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು.
    ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಕೇವಲ 6 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 11,000 ರೂ ಗಳು ಹಾಗೂ 3 ಮೊಬೈಲ್‍ಗಳು, ಮೂಲ ಆಧಾರ ಕಾರ್ಡ, ಮೂಲ ಜಮೀನಿನ ಮ್ಯೂಟೆಶನ್ ದಸ್ತಾವೇಜುಗಳು ಸೇರಿ ದೂರುದಾರರಿಂದ ಸುಲಿಗೆ ಮಾಡಿದ್ದ ಎಲ್ಲಾ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಡಿಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ಗ್ರಾಮೀಣ ಠಾಣೆ ಪಿಎಸ್ಐ ಪ್ರತಾಪ್ ಪಿ, ಸಿಬ್ಬಂದಿ ಮಹಾದೇವ ನಾಯ್ಕ, ಚೇತನಕುಮಾರ ನಾಯ್ಕ, ಗಣಪತಿ ನಾಯ್ಕ, ಚೇತನ್ ಜೆ.ಎನ್., ಎಚ್.ಸಿ.ಮಂಜುನಾಥ ಪೂಜಾರಿ, ಪ್ರದೀಪ ರೇಣಕರ, ಶ್ರೀಧರ ನಾಯ್ಕ, ಪ್ರಸಾದ ಎಮ್., ರಮೇಶ ಬೆಳಗಾಂವಕರ, ರಾವು ಸಾಹೇಬ ಕಿತ್ತೂರು, ಲಕ್ಷ್ಮಪ್ಪ ವಾಲೀಕರ, ಪಾಂಡು ನಾಗೋಜಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top