Slide
Slide
Slide
previous arrow
next arrow

ಮಹಿಳೆಯರು ಸ್ವಯಂ ಉದ್ಯೋಗದಿಂದ ಸ್ವಾವಲಂಬಿಗಳಾಗಿ: ಜ್ಯೋತಿ ಭಟ್

300x250 AD

ಸಿದ್ದಾಪುರ: ಮಹಿಳೆಯರು ಸ್ವಯಂ ಉದ್ಯೋಗದತ್ತ ಗಮನಹರಿಸಿ ಆರ್ಥಿಕ ಸ್ವಾವಲಂಬಿಗಳಾಗಲು ಯತ್ನಿಸಬೇಕು. ಬಿಡುವಿನ ಸಮಯದಲ್ಲಿ ಹೊಲಿಗೆ, ನರ್ಸರಿ ಮುಂತಾದ ಚಟುವಟಿಕೆಗಳ ಮೂಲಕ ಆದಾಯ ಪಡೆಯಲು ಸಾಧ್ಯ ಎಂದು ಲಯನ್ ರೀಜನಲ್ ಚೇರ್ಮನ್ ಜ್ಯೋತಿ ಭಟ್ ಶಿರಸಿ ಹೇಳಿದರು.
ಅವರು ಜೆ.ಎಂ.ಆರ್ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ವೃತ್ತಿಪರ ಶಿಕ್ಷಣ ಕೇಂದ್ರ ಹಾಗೂ ಆಶಾಕಿರಣ ಟ್ರಸ್ಟ್ ಮತ್ತು ಮನುವಿಕಾಸ ಸಂಸ್ಥೆಗಳ ಸಹಯೋಗದಲ್ಲಿ ಮೂರು ತಿಂಗಳ ಹೊಲಿಗೆ ತರಬೇತಿಯನ್ನು ಮಹಿಳೆಯರಿಗೆ ಏರ್ಪಡಿಸಿದ್ದು, ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ವಲಯ ಅಧ್ಯಕ್ಷ ನಾಗರಾಜ ಭಟ್ಟ ಮುರ್ಡೇಶ್ವರ ಮಾತನಾಡಿ, ವಿವಿಧ ಕೌಶಲ್ಯಗಳ ತರಬೇತಿ ಅಗತ್ಯ. ಶಿಕ್ಷಣ ಮತ್ತು ತರಬೇತಿ ಮಾಹಿತಿ ನಮ್ಮನ್ನು ಉತ್ಪಾದಕ ಅಂಶದ ಕಡೆ ಕೊಂಡೊಯುತ್ತದೆ ಎಂದು ತರಬೇತಿ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಆಶಾಕಿರಣ ಟ್ರಸ್ಟ್ ಉಪಾಧ್ಯಕ್ಷ ಸಿ.ಎಸ್.ಗೌಡರ್ ಹೆಗ್ಗೋಡಮನೆ ಹೊಲಿಗೆ ತರಬೇತಿ ಶಿಕ್ಷಕಿ ಶಮಿ, ಲಯನ್ಸ್ ಕ್ಲಬ್ ಅಧ್ಯಕ್ಷ ರವಿ ಎಂ.ಪಾಟೀಲ, ಮನುವಿಕಾಸ ಸಂಸ್ಥೆಯ ಮಾರ್ಗದರ್ಶಕಿ ಗೀತಾ, ಮನುವಿಕಾಸ ಸಂಸ್ಥೆ ಅಧ್ಯಕ್ಷ ಗಣಪತಿ ಭಟ್ಟ ಕರ್ಜಗಿ, ತರಬೇತಿ ಪಡೆದವರ ಪರವಾಗಿ ರಮ್ಯಾ ಮಾತನಾಡಿದರು.
ಜಿಲ್ಲಾ ಮಾಜಿ ಗವರ್ನರ್ ಹಾಗೂ ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ ಅಧ್ಯಕ್ಷತೆ ವಹಿಸಿದ್ದರು. ಶ್ಯಾಮಲಾ ಹೆಗಡೆ ಹೂವಿನಮನೆ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಕಮಲಾಕ್ಷಿ ನಿರೂಪಿಸಿದರು. ಲಯನ್ಸ್ ಕಾರ್ಯದರ್ಶಿ ಕುಮಾರ ಗೌಡರ್ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top