• Slide
    Slide
    Slide
    previous arrow
    next arrow
  • ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಪನ್ನ

    300x250 AD

    ಶಿರಸಿ:ತಾಲೂಕಿನ ಕುಳುವೆ ಪಂಚಾಯತ ವ್ಯಾಪ್ತಿಯ ಹಲಸಿನ ಕೈ ಗ್ರಾಮದ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು‌ ವಿಜೃಂಭಣೆಯಿಂದ ನೆರವೇರಿಸಲಾಯಿತು.

    ಕಳೆದ  29 ವರ್ಷದಿಂದ‌ ಶ್ರೀ ದೇವಿಯ  ನವರಾತ್ರಿ ಪೂಜೆಯನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ.ಈ ಬಾರಿಯೂ ಒಂಬತ್ತು ದಿನಗಳ ಕಾಲ‌ ಶ್ರೀ ದೇವಿಗೆ ಅಭಿಷೇಕ, ಮಹಾಮಂಗಳಾರತಿ, ಅನ್ನ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.

    300x250 AD

     ಕೊನೆಯ ದಿನವಾದ ವಿಜಯ ದಶಮಿಯಂದು  ರಘುಪತಿ ನಾಯ್ಕ್ ಹೆಗ್ಗರಣೆ,  ಮಾರುತಿ ಯಕ್ಷಗಾನ ಮಂಡಳಿ ಇವರಿಂದ ತಾಳಮದ್ದಳೆ ಹಾಗೂ  ಭಜನಾ ಕಾರ್ಯಕ್ರಮಗಳು ನಡೆದವು.ಸುತ್ತಮುತ್ತ ಗ್ರಾಮದ ಭಕ್ತರು ಶ್ರೀ ದೇವಿಗೆ ಉಡಿ ಸೇವೆ,ಹಣ್ಣು ಕಾಯಿ ಸಮರ್ಪಿಸಿ ,ಅನ್ನ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು..

    Share This
    300x250 AD
    300x250 AD
    300x250 AD
    Leaderboard Ad
    Back to top