Slide
Slide
Slide
previous arrow
next arrow

ಚುಟುಕು ಕವಿಗೋಷ್ಠಿಗೆ ಹೆಸರು ನೋಂದಾಯಿಸಿಕೊಳ್ಳಲು ಇಲ್ಲಿದೆ ಮಾಹಿತಿ

300x250 AD

ಶಿರಸಿ: ಶಿರಸಿಯಲ್ಲಿ ಅ. 16 ರಂದು ನಡೆಯಲಿರುವ ಚುಟುಕು ಸಾಹಿತ್ಯ ಪರಿಷತ್ತಿನ ದಶಮಾನೋತ್ಸವ ಸಮಾರಂಭದ ಪ್ರಯುಕ್ತ ಆಯೋಜಿಸಿರುವ ಚುಟುಕು ಕವಿಗೋಷ್ಠಿಯಲ್ಲಿ ಭಾಗವಹಿಸಲು ಶಿರಸಿ ಶೈಕ್ಷಣಿಕ ಜಿಲ್ಲೆಯ ಕವಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಆಮಂತ್ರಿಸಲಾಗಿದೆ. ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳುವ ಒಟ್ಟು 30 ಕವಿಗಳಿಗೆ ಮಾತ್ರ ಚುಟುಕು ಕವಿಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶವಿದ್ದು, ಹೆಸರು ನೋಂದಾಯಿಸಿಕೊಳ್ಳಲು ಅ.5 ಅಂತಿಮ ದಿನವಾಗಿರುತ್ತದೆ. ನಂತರ ಬರುವವರಿಗೆ ಅವಕಾಶ ನೀಡಲಾಗುವುದಿಲ್ಲ. ಭಾಗವಹಿಸಲು ಇಚ್ಛಿಸುವ ಕವಿಗಳು ತಮ್ಮ ಪೂರ್ಣ ಹೆಸರು, ಸ್ವಂತ ವಿಳಾಸ ಹಾಗೂ ವಾಟ್ಸಾಪ್ ಸಂಖ್ಯೆಯ ಮಾಹಿತಿಯನ್ನು 9945668304 ಈ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳಿಸಿ ನೋಂದಾಯಿಸಿಕೊಳ್ಳಲು ಕೋರಿದೆ.ಹೆಸರು ನೋಂದಾಯಿಸಿದವರು ಕಡ್ಡಾಯವಾಗಿ ಹಾಜರಿರಬೇಕು. ಅವಕಾಶ ಪಡೆದ ಕವಿಗಳ ವಾಟ್ಸಾಪ್ ಸಂಖ್ಯೆಗೆ ಕಾರ್ಯಕ್ರಮದ ವಿವರವನ್ನು ಕಳಿಸಲಾಗುವುದು ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕ ಶಿರಸಿ ಪರವಾಗಿ ಜಿಲ್ಲಾಧ್ಯಕ್ಷ ಮಹೇಶಕುಮಾರ ಹನಕೆರೆ, ಶಿರಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top