Slide
Slide
Slide
previous arrow
next arrow

ನವರಾತ್ರಿ ಪ್ರಯುಕ್ತ ಲಯನ್ಸ ಶಾಲೆಯಲ್ಲಿ ಶಾರದಾ ಪೂಜೆ

300x250 AD

ಶಿರಸಿ: ನಗರದ ಲಯನ್ಸ್ ಶಾಲೆಯಲ್ಲಿ ಸೆ. 30, ಶುಕ್ರವಾರ ನವರಾತ್ರಿಯ ಲಲಿತಾ ಪಂಚಮಿಯಂದು ಶಾರದಾ ಪೂಜೆಯನ್ನು ನೆರವೇರಿಸಲಾಯಿತು. ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲ.ಪ್ರೊ.ಎನ್. ವಿ. ಜಿ. ಭಟ್ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ನಾಯಕ್ , ಲಯನ್ಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ್ ಹೆಗಡೆ, ಲಯನ್ಸ್ ಸದಸ್ಯರುಗಳಾದ ಲಯನ್ ಲೊಕೇಶ ಹೆಗಡೆ , ಲಯನ್ ಶ್ಯಾಮಸುಂದರ ಭಟ್, ಲಯನ್ ಅಶ್ವಥ್ ಹೆಗಡೆ ,ಲಯನ್ ಶೇಷಗಿರಿ ಹೆಗಡೆಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೂ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಭಜನೆ, ಶ್ಲೋಕ, ವೇದ ಪಠಣದ ಮೂಲಕ ಶಾಲೆಯ ಪ್ರಾಂಗಣದಲ್ಲಿ ಭಕ್ತಿ ಭಾವದ ವಾತಾವರಣವನ್ನು ಸೃಷ್ಟಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆ ದಂಪತಿಗಳು ಶಾರದಾ ಪೂಜೆಯನ್ನು ನೆರವೇರಿಸಿದರು. ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. .

300x250 AD
Share This
300x250 AD
300x250 AD
300x250 AD
Back to top