• Slide
    Slide
    Slide
    previous arrow
    next arrow
  • ಬೀದಿನಾಯಿಗಳ ನಿಯಂತ್ರಣಕ್ಕೆ ಪ.ಪಂ ಸಭೆಯಲ್ಲಿ ಸೂಚನೆ

    300x250 AD

    ಸಿದ್ದಾಪುರ: ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಿ ಎಂದು ಉಪಾಧ್ಯಕ್ಷ ರವಿಕುಮಾರ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.

    ಅವರು ಪಟ್ಟಣದ ಪ.ಪಂ ಸಭಾಭವನದಲ್ಲಿ ಗುರುವಾರ ಪ.ಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸೂಚಿಸಿದರು. ಹಳಿಯಾಳದಲ್ಲಿ ಮುಖ್ಯಾಧಿಕಾರಿಗಳ ವಿರುದ್ದ ದೂರು ದಾಖಲಾಗಿದೆ. ಆದ್ದರಿಂದ ನಿಯಮದಂತೆ ನಾಯಿಗಳನ್ನು ಹಿಡಿದು ಸ್ಥಳಾಂತರಿಸುವ ಕೆಲಸವಾಗಬೇಕು ಎಂದು ಕೆ.ಜಿ.ನಾಯ್ಕ ಹಣಜೀಬೈಲ್ ಹೇಳಿದರು.

    ಬೀದಿನಾಯಿಗಳ ಹಿಡಿಯುವ ಬಗ್ಗೆ ಹಿಂದೆ ಜಿಲ್ಲಾಧಿಕಾರಿಗಳಿಂದ ಟೆಂಡರ್ ಆಗುತ್ತಿತ್ತು. ಈ ಬಾರಿ ಇಲ್ಲಿಯವರೆಗೆ ಯಾವುದೇ ಸೂಚನೆ ಇಲ್ಲ. ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡುವ ಯೋಜನೆ ಇದೆ. ಹಿಂದೆ ನಾಯಿಗಳನ್ನು ಕತ್ತಲೆ ಕಾನಿಗೆ ಬಿಡಲಾಗಿತ್ತು ಆದರೆ ಸುಮಾರು 20 ಕಿ.ಮಿ.ದೂರದಿಂದ ಅವು ಪುನಃ ಪಟ್ಟಣಕ್ಕೆ ಬಂದಿದ್ದವು. ಆದ್ದರಿಂದ ಎನು ಸೂಚನೆ ಬರುತ್ತದೆಯೋ ಅದರಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಕುಮಾರ ಡಿ. ನಾಯ್ಕ ಭರವಸೆ ನೀಡಿದರು.

    ಪಟ್ಟಣದ ನೆಹರೂ ಮೈದನಾದಲ್ಲಿ ಗಣೇಶ ಹಬ್ಬದಲ್ಲಿ ಪಟಾಕಿ ಅಂಗಡಿಯನ್ನು ಹಾಕಲಾಗಿತ್ತು ಆದರೆ ಅದರ ಆದಾಯ ಕಡಿಮೆ ತೋರಿಸಲಾಗುತ್ತಿದೆ ಇದಕ್ಕೆ ಕಾರಣವೇನು ಎಂದು ಸದಸ್ಯ ಮಾರುತಿ ನಾಯ್ಕ ಹೊಸುರು ಕೇಳಿದರು.ಒಟ್ಟೂ ಐದು ಪಟಾಕಿ ಅಂಗಡಿಗಳನ್ನು ಹಾಕಲಾಗಿತ್ತು ಪ್ರತಿ ಅಂಗಡಿಗೆ ದಿನವೊಂದಕ್ಕೆ ಐದುನೂರುರೂ. ಹಾಗೂ ಕಸನಿರ್ವಹಣೆಗೆ ಒಂದುಸಾವಿರರೂ. ಎಂದು ನಿರ್ಣಯಿಸಲಾಗಿತ್ತು ಅದರಲ್ಲಿ ಎರಡು-ಮೂರು ಅಂಗಡಿಗಳವರು ನಾಲ್ಕು ದಿನದ ಅನುಮತಿ ಪಡೆದಿದ್ದರು ಇದರಿಂದ ಆದಾಯ ಕಡಿಮೆಯಾಗಿದೆ ಎಂದು ಮುಖ್ಯಾದಿಕಾರಿ ಕುಮಾರ ನಾಯ್ಕ ತಿಳಿಸಿದರು.

    300x250 AD

    ನೆಹರೂ ಮೈದಾನದಲ್ಲಿದ್ದ ಎಲ್ಲಾ ಪಟಾಕಿ ಅಂಗಡಿಗಳು ಒಂಬತ್ತು ದಿನವೂ ತೆರೆಯಲಾಗಿತ್ತು ಇದು ಪ.ಪಂ ಅಧಿಕಾರಿಗಳ ಗಮನಕ್ಕೆ ಬರದಿರುವುದು ಆಶ್ಚರ್ಯವಾಗಿದೆ. ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಿ ಪ.ಪಂ ಆದಾಯಕ್ಕೆ ತೊಂದರೆ ಬಾರದಂತೆ ನೋಡಿಕೊಳ್ಳಿ ಎಂದು ಸದಸ್ಯರು ಸೂಚಿಸಿದರು.

    ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೆಗುಂಡಿ, ಸದಸ್ಯರಾದ ಗುರುರಾಜ ಶಾನಭಾಗ, ನಂದನ ಬೋರ್ಕರ್, ವೆಂಕೋಬಾ, ಸುಧೀರ್ ನಾಯ್ಕ, ಯಶೊಧಾ ಮಡಿವಾಳ, ಕವಿತಾ ಹೆಗಡೆ, ರಾಧಿಕಾ ಕಾನಗೋಡು, ಮಂಜುಳಾ ನಾಯ್ಕ, ನಾಮನಿರ್ದೇಶಿತ ಸದಸ್ಯ ಮಂಜುನಾಥ ಭಟ್ಟ, ಸುರೇಶ ನಾಯ್ಕ ಬಾಲಿಕೊಪ್ಪ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top