• Slide
  Slide
  Slide
  previous arrow
  next arrow
 • ಕಾರವಾರ ನಗರಸಭೆಗೆ ರಾಷ್ಟ್ರಮಟ್ಟದ ಸ್ವಚ್ಛ ಸರ್ವೇಕ್ಷಣ- 2022 ಪ್ರಶಸ್ತಿ

  300x250 AD

  ಕಾರವಾರ: ರಾಷ್ಟ್ರಮಟ್ಟದ ಸ್ವಚ್ಛ ಸರ್ವೇಕ್ಷಣ- 2022ರ ಪ್ರಶಸ್ತಿಗೆ ಭಾಜನವಾಗಿರುವ ಕಾರವಾರ ನಗರಸಭೆಯಿಂದ ಶುಕ್ರವಾರ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಲಾಯಿತು.

  ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ತ್ಯಾಜ್ಯ ಮುಕ್ತ ನಗರ ನಿರ್ಮಾಣ ಮಾಡುವ ಉದ್ದೇಶದಿಂದ ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯ, ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ಇಂಡಿಯನ್ ಸ್ವಚ್ಚತಾ ಲೀಗ್ ಆಯೋಜಿಸಿತ್ತು. ದೇಶದ 1850 ನಗರದಲ್ಲಿ ಈ ಚಟುವಟಿಕೆ ನಡೆಸಿದ್ದು, 50 ಸಾವಿರದಿಂದ 1 ಲಕ್ಷ ಜನಸಂಖ್ಯೆ ವ್ಯಾಪ್ತಿಯಲ್ಲಿ ಕಾರವಾರ ನಗರಸಭೆ ರಾಜ್ಯಕ್ಕೆ ಸ್ಚಚ್ಚ ನಗರವೆಂದು ಪ್ರಶಸ್ತಿಯನ್ನ ಪಡೆದಿತ್ತು. ದೆಹಲಿಯಲ್ಲಿ ಸಚ್ಚ ನಗರ ಸಂವಾದ ಮತ್ತು ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಕಾರವಾರ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಪೌರಾಯುಕ್ತ ಆರ್.ಪಿ.ನಾಯ್ಕ, ಉಪಾಧ್ಯಕ್ಷ ಪ್ರಕಾಶ್ ನಾಯ್ಕ ಪ್ರಶಸ್ತಿಯನ್ನ ಸ್ವೀಕರಿಸಿದ್ದಾರೆ.

  300x250 AD

  ಕಾರವಾರವನ್ನ ಸಚ್ಛ ನಗರವನ್ನಾಗಿ ಮಾಡಲು ಹಗಲಿರಲು ಶ್ರಮಿಸಿ, ರಾಷ್ಟ್ರಮಟ್ಟದ ಪ್ರಶಸ್ತಿ ಪಡೆಯುವ ಮೂಲಕ ಇಡೀ ರಾಜ್ಯದಲ್ಲಿಯೇ ಗಮನ ಸೆಳೆಯುವಂತೆ ಮಾಡಿದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ, ಪೌರಾಯುಕ್ತರ, ಸದಸ್ಯರ, ಸಿಬ್ಬಂದಿ ವರ್ಗದವರ, ಪ್ರಮುಖವಾಗಿ ಪೌರ ಕಾರ್ಮಿಕರ ಕಾರ್ಯಕ್ಕೆ ನಗರದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕಾರವಾರ ನಗರದಲ್ಲಿ ಕಳೆದ ಏಳುವರೆ ವರ್ಷದಿಂದ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಲು ಸ್ವಚ್ಚತಾ ಕಾರ್ಯವನ್ನ ಪ್ರತಿವಾರ ತಪ್ಪದೇ ಮಾಡಿಕೊಂಡು ಬರುತ್ತಿರುವ ಪಹರೆ ವೇದಿಕೆಯ ಕಾರ್ಯಕರ್ತರ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top