ಶಿರಸಿ: ರಾಜ್ಯದ ಇತಿಹಾಸ ಪ್ರಸಿದ್ಧ ಆರು ದೇವಾಲಯಗಳಲ್ಲಿ ಒಂದಾಗಿರುವ ತಾಲೂಕಿನ ಮಳಲಗಾಂವ ಗ್ರಾಮದ ಶ್ರೀ ಸೂರ್ಯನಾರಾಯಣ ದೇವರ ನೂತನ ಮೂರ್ತಿಯನ್ನ ಶಿರಸಿಯಿಂದ ಗ್ರಾಮಕ್ಕೆ ತರುವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಶ್ರೀ ದೇವರ ಮೂರ್ತಿ ಭಿನ್ನವಾದ ಹಿನ್ನೆಲೆ ಶಿರಸಿಯ ಶಿಲ್ಪಿಯೊಬ್ಬರ ಬಳಿ ನೂತನ ಮೂರ್ತಿ ನಿರ್ಮಾಣಗೊಂಡಿತ್ತು. ಅದನ್ನ ಮಳಲಗಾಂವ ಗ್ರಾಮಕ್ಕೆ ತರಲು ಗ್ರಾಮದ ಮೂರು ನೂರುಕ್ಕು ಅಧಿಕ ಗ್ರಾಮಸ್ಥರು ಶಿರಸಿಗೆ ಆಗಮಿಸಿದ್ದರು
ಗ್ರಾಮದ ಪ್ರಮುಖರಾದ ಭೀಮಣ್ಣ ಟಿ ನಾಯ್ಕ, ಹಿಂದೂ ಜಾಗರಣ ವೇದಿಕೆಯ ಕೃಷ್ಣ ಎಸಳೆ, ಗ್ರಾಮಭಿವೃದ್ದಿ ಸಮಿತಿ ಅಧ್ಯಕ್ಷ ಸುನೀಲ್ ಬಿ.ನಾಯ್ಕ, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ವಿಶ್ವ ಮಳಲಗಾಂವ, ಸುಭಾಷ್ ಮಡಿವಾಳ, ಕೃಷ್ಣ ನೆಟ್ಟಕ್ಕಿ, ಉಮೇಶ್, ನಾಗಪ್ಪ ಗಿರ್ಗಿ ಸೇರಿದಂತೆ ಊರಿನ ಹಿರಿಕಿರಿಯರು ಮೂರ್ತಿಗೆ ಪೂಜೆ ಸಲ್ಲಿದ್ದರು.
ನಂತರ ಡಿ.ಜೆ, ಚಂಡೆ, ಡೊಳ್ಳು, ವಾಲಗದಂತ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಸಾಗಲಾಯಿತು. ಗ್ರಾಮಕ್ಕೆ ಮೆರವಣಿಗೆ ಬರುತ್ತಿದ್ದಂತೆಯೆ ಮಹಿಳೆಯರು ಪೂರ್ಣಕುಂಭ ಮೇಳದೊಂದಿಗೆ ಬರಮಾಡಿಕೊಂಡರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು ಗ್ರಾಮದ ಯುವಕರು ಯುವತಿಯರು ಚಂಡೆ ವಾದ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು