ಹಿರೇಗುತ್ತಿ: ಕುಮಟಾ ತಾಲೂಕಿನ ಹಿರೇಗುತ್ತಿಯ ವ್ಯವಸಾಯ ಸೇವಾ ಸಹಕಾರಿ ಸಂಘವು 2021-22 ನೇ ಸಾಲಿನಲ್ಲಿ 11.65ಲಕ್ಷ ರೂ ಲಾಭ ಗಳಿಸಿದೆ.
ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ರವಿವಾರ ನಡೆದ ಪುನರ್ಘಟಿತ 46ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ಅಧ್ಯಕ್ಷ ನೀಲಕಂಠ ನಾರಾಯಣ ನಾಯಕ ಸಂಘವು ಸಾಲ ವಸೂಲಾತಿಯಲ್ಲಿ 98% ಪ್ರಗತಿ ಸಾಧಿಸಿದ್ದು ಪ್ರಸಕ್ತ ಸಾಲಿನಲ್ಲಿ 6 ಕೋಟಿ ರೂ ವ್ಯವಹಾರ ನಡೆಸಿದ್ದು ಬ್ಯಾಂಕ್ ಡೆಪೊಸಿಟ್ ಹಾಗೂ ವಾರ್ಷಿಕ ಖರ್ಚು ವೆಚ್ಚಗಳನ್ನು ತೆಗೆದಿರಿಸಿದ ನಂತರ 11.65 ಲಕ್ಷ ರೂ ಲಾಭ ಗಳಿಸಿದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಹರೀಶ ಬಿ ನಾಯಕ, ನಿರ್ದೇಶಕರುಗಳಾದ ಕೃಷ್ಣಮೂರ್ತಿ ನಾಯಕ, ಆನಂದು ಬಿ ನಾಯಕ, ವಿನಾಯಕ ನಾಯಕ, ಉದಯ ನಾಯ್ಕ, ಮುರಳೀಧರ ನಾಯಕ, ಉಮೇಶ ಗಾಂವಕರ, ಪಾರ್ವತಿ ಎಸ್ ನಾಯಕ, ಯೋಗಿನಿ ನಾಯಕ, ಸುಬ್ರಹ್ಮಣ್ಯ ನಾಯಕ, ಬೊಮ್ಮಯ್ಯ ಕಲ್ಲು ಹಳ್ಳೇರ ಸೇರಿದಂತೆ ಊರಿನ ರಾಮು ಕೆಂಚನ್, ಲಕ್ಷ್ಮೀಧರ ಗಾಂವಕರ, ಶ್ರೀಧರ ನಾಯಕ, ಬೊಮ್ಮಯ್ಯ ನಾಯಕ, ಸುಲು ಪಟಗಾರ, ಸದಾನಂದ ಕವರಿ, ನಾಗೇಶ ಟಿ ನಾಯಕ, ಮೋಹನ ಬಿ ಕೆರೆಮನೆ, ಕಮಲಾಕ್ಷ ಗಾಂವಕರ, ಶ್ರೀಧರ ದೇವಣ್ಣ ನಾಯಕ, ವೆಂಕಟ್ರಮಣ ನಾಯಕ, ಬಾಲಕೃಷ್ಣ ನಾಯಕ, ರಾಜೀವ ನಾಯಕ, ಸರೋಜಾ ನಾಯಕ, ಪಾರ್ವತಿ ಕೆಂಚನ್, ತಿಮ್ಮಣ್ಣ ಹಳ್ಳೇರ ಹಾಗೂ ಊರ ನಾಗರಿಕರು ಹಾಜರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಘವೇಂದ್ರ ನಾಯಕ ಸರ್ವರನ್ನು ಸ್ವಾಗತಿಸಿದರು. ವ್ಯವಸಾಯ ಸಂಘದ ಸಿಬ್ಬಂದಿಗಳಾದ ಗಣೇಶ ನಾಯಕ, ಕಮಲಾಕರ ನಾಯಕ, ಗೋವಿಂದ ಗೌಡ, ಬ್ರಹ್ಮಾನಂದ ನಾಯಕ ಸಹಕರಿಸಿದರು.