Slide
Slide
Slide
previous arrow
next arrow

ಬಿಜೆಪಿ ಕಾರ್ಯಾಲಯದಲ್ಲಿ ಖಾದಿ ಉತ್ಸವ

300x250 AD

ಕುಮಟಾ: ಸೇವಾ ಪಾಕ್ಷಿಕದ ಅಂಗವಾಗಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸೆ.29 ರಿಂದ ಅ.2 ರವರೆಗೆ ಖಾದಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ 72 ನೆಯ ಜನ್ಮ ದಿನಾಚರಣೆಯ ಪ್ರಯುಕ್ತ ದೇಶಾದ್ಯಂತ ಸೇವಾ ಪಾಕ್ಷಿಕ ಕಾರ್ಯಕ್ರಮದ ಮೂಲಕ ಸೆ 17 ರಿಂದ ಅ.2 ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವರ್ಷ ವಿಶೇಷವಾಗಿ ಖಾದಿ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಕಡಲತೀರವನ್ನು ಸ್ವಚ್ಛಗೊಳಿಸುವುದು, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಕೆರೆಗಳ ಸ್ವಚ್ಛತೆ, ಪಕ್ಷದ ಸಂಸ್ಥಾಪಕರಾದ ದೀನ ದಯಾಳ ಉಪಾಧ್ಯಾಯರ ಜನ್ಮ ದಿನ, ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನ, ಕೊವಿಡ್ ಪ್ರತಿಬಂಧಕ ಲಸಿಕೆ ಪಡೆಯಲು ಜಾಗೃತಿ ಅಭಿಯಾನ, ಕಮಲೋತ್ಸವ ಹೀಗೆ ಹಲವಾರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಿದ್ದೇವೆ ಎಂದ ಅವರು, ಗಾಂಧಿ ಜಯಂತಿ ನಿಮಿತ್ತ ಸೆ.29 ರಿಂದ ಅ.2 ರವರೆಗೆ ಖಾದಿ ಉತ್ಸವ ಹಮ್ಮಿಕೊಂಡು ಇಲ್ಲಿನ ಜನರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಖಾಗಿ ಬಟ್ಟೆ ಸಿಗುವ ದೃಷ್ಟಿಯಿಂದ ಇದನ್ನು ನಡೆಸುತ್ತಿದ್ದೇವೆ ಎಂದರು.
ಮAಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಸೆ.17 ರಿಂದ ಇಲ್ಲಿಯ ವರೆಗೆ ವಿವಿಧ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಸೆ.29 ರಿಂದ ಅ.2 ರವರೆಗೆ ನಡೆಯುವ ಖಾದಿ ಉತ್ಸವದ ಯಶಸ್ಸಿಗೆ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ವಿನಂತಿಸಿದರು.
ಖಾದಿ ಉತ್ಸವದ ಸಹ ಸಂಚಾಲಕ ಗಜಾನನ ಗುನಗಾ ಮಾತನಾಡಿ, ಸಾಗರ, ಅಕ್ಕಿ ಆಲೂರು, ಮಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಖಾದಿ ಮಳಿಗೆಗಳು ಆಗಮಿಸುತ್ತವೆ. ಕುಮಟಾ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಜನರು ಆಗಮಿಸಿ, ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಅಶೋಕ ಪ್ರಭು, ಜಿಲ್ಲಾ ಯುವ ಮೋರ್ಚಾ ಪ್ರಭಾರಿ ಪ್ರೋ ಎಂ ಜಿ ಭಟ್ಟ, ಮುಖಂಡರಾದ ವಿನೋದ ಪ್ರಭು, ವಿನಾಯಕ ನಾಯ್ಕ, ವಿಶ್ವನಾಥ ನಾಯ್ಕ, ಜಗದೀಶ ಭಟ್ಟ, ಮಧುಸೂದನ ಹೆಗಡೆ, ಆದಿತ್ಯ ಶೇಟ್, ಮೋಹಿನಿ ಗೌಡ, ಜಯಾ ಶೇಟ್, ಪಲ್ಲವಿ ಮಡಿವಾಳ, ಸಂತೋಷ ಹೆಗಡೆ, ಅಣ್ಣಪ್ಪ ನಾಯ್ಕ, ದಿವಾಕರ ನಾಯ್ಕ ಇತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top