Slide
Slide
Slide
previous arrow
next arrow

ಮಳಲಗಾಂವ ಶಾಲೆಯಲ್ಲಿ ಪೋಷಣ ಅಭಿಯಾನ: ವಿವಿಧ ಸ್ಪರ್ಧೆ,ಸಾಂಸ್ಕೃತಿಕ ಕಾರ್ಯಕ್ರಮ

300x250 AD

ಯಲ್ಲಾಪುರ: ತಾಲೂಕಿನ ಮಳಲಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಗನವಾಡಿ ಕೇಂದ್ರ,ಸೇವಾಸ್ಪೂರ್ತಿ ಸೇವಾದಳ ಶಾಖೆಗಳ ಸಹಯೋಗದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ, ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು,ರಂಗೋಲಿ ಸ್ಪರ್ಧೆ  ನಡೆಯಿತು.

    ಬಿ.ಆರ್.ಪಿ ಸಂತೋಷ ಜಗಳೂರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ಪೋಷಕಾಂಶ ಆಹಾರಗಳ ಬಗ್ಗೆ ತಿಳುವಳಿಕೆ ನೀಡಿ ಆರೋಗ್ಯವಂತ ಮಕ್ಕಳು ನಮ್ಮ ಆಸ್ತಿಯಾಗುವಂತೆ ಮಾಡುವ ಉದ್ದೇಶ ಈ ಪೋಷಣಾ ಅಭಿಯಾನದ್ದಾಗಿದೆ ಎಂದರು.

    ಸೇವಾದಳದ ತಾಲೂಕಾ ಸಂಜೀವಕುಮಾರ್ ಹೊಸ್ಕೇರಿ ಮಾತನಾಡಿ, ಶಾಲೆಯಲ್ಲಿ ಮಕ್ಕಳ ಭೌತಿಕ ಪ್ರಗತಿಯೊಂದಿಗೆ ಶೈಕ್ಷಣಿಕ ಪ್ರಗತಿಯೂ ಕಾಣಬೇಕು ಎಂದರು. ಗ್ರಾ.ಪಂ ಸದಸ್ಯ ಆರ್.ಎಸ್.ಭಟ್ಟ ಪುಸ್ತಕ ಶೇಖರಣೆಯ ಚಿಣ್ಣರ ಬ್ಯಾಂಕ್ ಉದ್ಘಾಟಿಸಿದರು. ಎಸ್.ಡಿ.ಎಂ.ಸಿ‌ ಅಧ್ಯಕ್ಷ ಮಹೇಶ ಭಾಗ್ವತ ಗಾಣಗದ್ದೆ ಅಧ್ಯಕ್ಷತೆ ವಹಿಸಿದ್ದರು.

300x250 AD

   ಪತ್ರಕರ್ತ ನರಸಿಂಹ ಸಾತೊಡ್ಡಿ, ಸಿ.ಆರ್.ಪಿ ಕೆ.ಆರ್.ನಾಯ್ಕ್, ಉಮ್ಮಚಗಿ ಕುಂದರಗಿ ಸಿ.ಆರ್.ಪಿ ವಿಷ್ಣು ಭಟ್ಟ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಶ್ರೀಕಾಂತ ಭಾಗ್ವತ್, ಅಂಗನವಾಡಿ ಸಹಾಯಕಿ ವಿಜಯಾ ಭಾಗ್ವತ್, ಆರೋಗ್ಯ ಸಹಾಯಕಿ ವೇದಾ ನಾಯ್ಕ,ಆಶಾ ಕಾರ್ಯಕರ್ತೆ ನಾಗವೇಣಿ ಅಗೇರ್, ಕಾವೇರಿ ಮಳಲಗಾಂವ್, ಮುಖ್ಯಾಧ್ಯಾಪಕಿ ಸುಜಾತಾ ನಾಯ್ಕ, ಶಿಕ್ಷಕರಾದ ಲತಾ ತಳೇಕರ್,  ರಾಘವೇಂದ್ರ ಹೊನ್ನಾವರ ಉಪಸ್ಥಿತರಿದ್ದರು. ಪೋಷಣಾ ಅಭಿಯಾನದ ನಿಮಿತ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ,ಪಾಲಕರಿಗೆ ರಂಗವಲ್ಲಿ ಸ್ಪರ್ಧೆಗಳು ನಡೆದವು.

Share This
300x250 AD
300x250 AD
300x250 AD
Back to top