Slide
Slide
Slide
previous arrow
next arrow

ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ ಅಂಕೋಲಾಕ್ಕೆ 3 ಡಯಾಲಿಸಿಸ್ ಯಂತ್ರ: ರೂಪಾಲಿ

300x250 AD

ಕಾರವಾರ: ಅಂಕೋಲಾ ತಾಲೂಕು ಆಸ್ಪತ್ರೆಗೆ 2-3 ದಿನಗಳಲ್ಲಿ ಹೊಸ ಡಯಾಲಿಸಿಸ್ ಮಷಿನ್ ಬರಲಿದೆ. ನಂತರದ 15 ದಿನಗಳಲ್ಲಿ ಮತ್ತೆ 2 ಡಯಾಲಿಸಿಸ್ ಯಂತ್ರ ಬರಲಿದೆ. ನಮ್ಮ ಕ್ಷೇತ್ರದ ಜನತೆಗೆ ತೊಂದರೆ ಆಗಬಾರದು. ಡಯಾಲಿಸಿಸ್ ಗೆ ಪರದಾಡುವಂತಾಗಬಾರದು ಎಂದು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅಂಕೋಲಾಕ್ಕೆ 3 ಹಾಗೂ ಕಾರವಾರಕ್ಕೆ 1 ಡಯಾಲಿಸಿಸ್ ಯಂತ್ರ ನೀಡುತ್ತಿರುವುದಾಗಿ ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.
ಅಂಕೋಲಾ ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರ ಇತ್ತು. ಅದರಲ್ಲಿ ಒಂದು ಕೆಟ್ಟುಹೋಗಿದ್ದು, ಒಂದು ಡಯಾಲಿಸಿಸ್ ಯಂತ್ರ ಸದ್ಯ ಕಾರ್ಯನಿರ್ವಹಿಸುತ್ತಿದೆ. ಡಯಾಲಿಸಿಸ್ ಯಂತ್ರವನ್ನು ಸೆ.26ರಂದು ನೀಡುವುದಾಗಿ ಯಂತ್ರ ಪೂರೈಕೆ ಮಾಡುವವರು ನಮಗೆ ತಿಳಿಸಿದ್ದರು. ಆದರೆ ಯಂತ್ರ ಲಭ್ಯವಾಗದೆ ಇರುವುದರಿಂದ ನಿಗದಿತ ಸಮಯಕ್ಕೆ ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಡಯಾಲಿಸಿಸ್ ಯಂತ್ರಕ್ಕೆ ಬೇಡಿಕೆ ಹೆಚ್ಚಿರುವುದರಿಂದ ಪೂರೈಕೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಸದ್ಯದಲ್ಲೇ ಅಂದರೆ 2-3 ದಿನಗಳಲ್ಲಿ ಹೊಸ ಯಂತ್ರವನ್ನು ಅಂಕೋಲಾ ಆಸ್ಪತ್ರೆಗೆ ತಂದು ಅಳವಡಿಸಲಿದ್ದಾರೆ. ಇದಲ್ಲದೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 15 ದಿನಗಳಲ್ಲಿ ಮತ್ತೆ 2 ಹೊಸ ಡಯಾಲಿಸಿಸ್ ಯಂತ್ರಗಳು ಅಂಕೋಲಾ ಆಸ್ಪತ್ರೆಗೆ ಲಭಿಸಲಿದೆ. ಈ ಬಗ್ಗೆ ಪ್ರಕ್ರಿಯೆ ಆರಂಭವಾಗಿದೆ. ಈ ಯಂತ್ರ ಅಳವಡಿಕೆಗೆ ಅನುಕೂಲ ಕಲ್ಪಿಸುವ ಅವಶ್ಯಕತೆ ಇದ್ದು, ಈ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೆ ಒಂದು ಡಯಾಲಿಸಿಸ್ ಯಂತ್ರ ಕಾರ್ಯನಿರ್ವಹಿಸುತ್ತಿದ್ದು, ಸದ್ಯದಲ್ಲೇ ಇನ್ನೊಂದು ಯಂತ್ರ ಬರಲಿರುವುದರಿಂದ ರೋಗಿಗಳಿಗೆ ಯಾವುದೆ ತೊಂದರೆ ಸಮಸ್ಯೆ ಉಂಟಾಗದು. 15 ದಿನಗಳಲ್ಲಿ ಮತ್ತೆ 2 ಡಯಾಲಿಸಿಸ್ ಮಷಿನ್ ಬರಲಿದ್ದು, ಆಗ ಅಂಕೋಲಾ ಆಸ್ಪತ್ರೆಯಲ್ಲಿ ಒಟ್ಟೂ 4 ಡಯಾಲಿಸಿಸ್ ಯಂತ್ರ ರೋಗಿಗಳಿಗೆ ದೊರೆಯಲಿದೆ. ನಾಲ್ಕೂ ಯಂತ್ರಗಳು ಕಾರ್ಯಾರಂಭ ಮಾಡಿದ ಬಳಿಕ ಅಂಕೋಲಾ ತಾಲೂಕಿನಲ್ಲಿ ಡಯಾಲಿಸಿಸ್ ಗೆ ಯಾವ ಅಡ್ಡಿಯೂ ಇರಲಾರದು. ಕ್ಷೇತ್ರದಲ್ಲಿ ಒಟ್ಟೂ 4 ಡಯಾಲಿಸಿಸ್ ಯಂತ್ರಗಳು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಬರಲಿದೆ. ಇದಕ್ಕೆ ಅಕ್ಟೋಬರ್ 2021 ನಲ್ಲೇ ಕ್ರಿಯಾಯೋಜನೆ ಮಾಡಲಾಗಿತ್ತು. ಇವುಗಳಲ್ಲಿ 1 ಕಾರವಾರ ಹಾಗೂ 3 ಯಂತ್ರಗಳನ್ನು ಅಂಕೋಲಾಕ್ಕೆ ನೀಡಲಾಗಿದೆ. ಕಾರವಾರದಲ್ಲಿ ಹೆಚ್ಚಿನ ಡಯಾಲಿಸಿಸ್ ಯಂತ್ರ ಇರುವುದರಿಂದ ಅಂಕೋಲಾಕ್ಕೆ 3ನ್ನು ನೀಡಲಾಗಿದೆ. ಈ ಹಿಂದೆ ಕಾರವಾರ ಹಾಗೂ ಅಂಕೋಲಾಕ್ಕೆ ತಲಾ ಎರಡು ಅಂಬ್ಯುಲೆನ್ಸ್ ನೀಡಿದ್ದೆ. ಈಗ ಅಂಕೋಲಾದಲ್ಲಿ ಜನರು ಡಯಾಲಿಸಿಸ್‌ಗಾಗಿ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ರೋಗಿಗಳಿಗೆ ಯಾವುದೇ ತೊಂದರೆ ಉಂಟಾಗಬಾರದು ಎಂದು ಈ ಹಿಂದೆಯೇ ಅನುದಾನ ಒದಗಿಸಲಾಗಿದೆ. ಒಂದು ಕ್ಷೇತ್ರದಲ್ಲಿ ನಾಲ್ಕು ಅಂಬ್ಯುಲೆನ್ಸ್, ನಾಲ್ಕು ಡಯಾಲಿಸಿಸ್ ಯಂತ್ರಗಳನ್ನು ಶಾಸಕರ ಅನುದಾನದಲ್ಲಿ ನೀಡಿದ್ದು ರಾಜ್ಯದಲ್ಲೇ ಗಮನಾರ್ಹವಾದುದಾಗಿದೆ. ಜನತೆಯ ಆರೋಗ್ಯದ ಬಗ್ಗೆ ನಾನು ಕಾಳಜಿ ವಹಿಸಿದ್ದು, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಸಿಬ್ಬಂದಿ, ಉಪಕರಣ, ಅಗತ್ಯ ಸೌಲಭ್ಯದ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು, ಸರ್ಕಾರ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದೆ ಎಂದು ಶಾಸಕಿ ರೂಪಾಲಿ ತಿಳಿಸಿದ್ದಾರೆ.


ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ ಅಂಕೋಲಾಕ್ಕೆ ಒಟ್ಟೂ 3 ಡಯಾಲಿಸಿಸ್ ಯಂತ್ರಗಳು ಬರಲಿದೆ. ಒಂದು ಇನ್ನೆರಡು ದಿನಗಳಲ್ಲಿ ಬರಲಿದ್ದು, ಚಿಕಿತ್ಸೆಗೆ ಲಭ್ಯವಾಗಲಿದೆ. ಉಳಿದ ಎರಡು 10 ದಿನಗಳಲ್ಲಿ ಬರಲಿದೆ. ಅಂಕೋಲಾಕ್ಕೆ ಒಟ್ಟೂ 4 ಡಯಾಲಿಸಿಸ್ ಯಂತ್ರಗಳು ದೊರೆತಂತಾಗಲಿದೆ.
• ಡಾ.ಶರದ್ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

300x250 AD
Share This
300x250 AD
300x250 AD
300x250 AD
Back to top