• Slide
    Slide
    Slide
    previous arrow
    next arrow
  • ದೇಸಾಯಿಯವರ ಸಮಾಜಮುಖಿ ವ್ಯಕ್ತಿತ್ವ,ಜೀವನಾದರ್ಶ,ಎಲ್ಲರಿಗೂ ದಾರಿದೀಪ: ಎಂ.ಎಸ್.ಇಟಗಿ

    300x250 AD

    ದಾಂಡೇಲಿ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜನತಾ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಅಭಿನವ ಸರ್ವಜ್ಞ ಡಾ.ದಿನಕರ ದೇಸಾಯಿಯವರ ಜನ್ಮದಿನಾಚರಣೆಯ ಪ್ರಯುಕ್ತ ಉಪನ್ಯಾಸ ಹಾಗೂ ಚುಟುಕು ವಾಚನ ಕಾರ್ಯಕ್ರಮವು ಜನತಾ ವಿದ್ಯಾಲಯದ ಬೆಳ್ಳಿ ಹಬ್ಬ ಸಭಾಭವನದಲ್ಲಿ ಸೋಮವಾರ ಜರುಗಿತು.

    ಕಾರ್ಯಕ್ರಮ ಆರಂಭದಲ್ಲಿ ಚುಟಕು ಬ್ರಹ್ಮ ದಿನಕರ ದೇಸಾಯಿಯವರಿಗೆ ಪುಷ್ಪಗೌರವ ಸಲ್ಲಿಸಲಾಯಿತು. ಜನತಾ ವಿದ್ಯಾಲಯದ ಪ್ರಾಚಾರ್ಯರಾದ ಎಂ.ಎಸ್.ಇಟಗಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಜಿಲ್ಲೆಯ ಶೈಕ್ಷಣಿಕ ಕ್ಷೇತ್ರಕ್ಕೆ ಡಾ.ದಿನಕರ ದೇಸಾಯಿಯವರ ಕೊಡುಗೆ ಅಪಾರ. ಒಬ್ಬ ಕವಿಯಾಗಿ, ಚುಟುಕು ಬ್ರಹ್ಮನಾಗಿ, ಸಾಹಿತಿಯಾಗಿ ಅಪ್ಪಟ ಸಾಮಾಜಹಿಕ ಹೋರಾಟಗಾರರಾಗಿ, ಪರಿಶುದ್ಧ ರಾಜಕಾರಣಿಯಾಗಿ ದಿನಕರ ದೇಸಾಯಿಯವರು ಜಿಲ್ಲೆಗೆ ನೀಡಿದ ಕೊಡುಗೆ ಸದಾ ಸ್ಮರಣೀಯ. ದಿನಕರ ದೇಸಾಯಿಯವರ ಸಮಾಜಮುಖಿ ವ್ಯಕ್ತಿತ್ವ ಮತ್ತು ಅವರ ಜೀವನಾದರ್ಶಗಳು ನಮಗೆಲ್ಲರಿಗೂ ದಾರಿದೀಪವಾಗಿದೆ. ಶ್ರೇಷ್ಟ ವ್ಯಕ್ತಿತ್ವದ ದಿನಕರ ದೇಸಾಯಿಯವರ ಸ್ಮರಣೆ ಕಾರ್ಯಕ್ರಮವನ್ನು ಕಸಾಪ ಹಮ್ಮಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಜನತಾ ಪಿಯು ಕಾಲೇಜಿನ ಹಿರಿಯ ಉಪನ್ಯಾಸಕರಾದ ಜಿ.ಎಸ್.ಹೆಗಡೆಯವರು ಮಾತನಾಡಿ ದಿನಕರ ದೇಸಾಯಿಯವರು ಜಿಲ್ಲೆಯ ಬಹುದೊಡ್ಡ ಶಕ್ತಿ. ಅವರು ಬೆಳೆದ ರೀತಿ, ಸವೆಸಿದ ಹಾದಿ, ಅವರ ಹೋರಾಟದ ಬದುಕು, ಸಾಹಿತ್ಯ, ರಾಜಕೀಯ, ಸಾಮಾಜಿಕ ಸೇವೆ ಮತ್ತು ಹೋರಾಟ ಸದಾ ಅಮರ. ತನ್ನ ಸಾಹಿತ್ಯ ಕೃಷಿ ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ದಿನಕರ ದೇಸಾಯಿಯವರು ಸದಾ ನಮ್ಮ ನಡುವೆ ಇದ್ದಾರೆ ಎಂದ ಅವರು ಇಂಥಹ ಅಪರೂಪದ ಅಪೂರ್ವ ವ್ಯಕ್ತಿಯ ಸ್ಮರಣೆ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಕಸಾಪ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಹಿತ್ಯಾಭಿಮಾನಿ ಕೀರ್ತಿ ಗಾಂವಕರ ಮತ್ತು ಕಸಾಪ ಜಿಲ್ಲಾ ಕೋಶಾಧ್ಯಕ್ಷರಾದ ಮುರ್ತುಜಾ ಆನೆಹೊಸೂರು ಅವರು ಮಾತನಾಡಿ ತನ್ನ ಹರಿತವಾದ ಚುಟುಕುಗಳ ಮೂಲಕ ದಿನಕರ ದೇಸಾಯಿಯವರು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸಿದ್ದರು. ದಿನಕರ ದೇಸಾಯಿಯವರು ನಮ್ಮ ಜಿಲ್ಲೆಯ ಮಹತ್ವದ ಆಸ್ತಿ ಎಂದರು.

    300x250 AD

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷರಾದ ನಾರಾಯಣ ನಾಯ್ಕ ಅವರು ಮಾತನಾಡಿ ನಮ್ಮ ಜಿಲ್ಲೆಯವರೇ ಆದ ಡಾ.ದಿನಕರ ದೇಸಾಯಿಯವರನ್ನು ಸ್ಮರಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ದಿನಕರ ದೇಸಾಯಿಯವರ ನಡೆ ಮತ್ತು ನುಡಿ ನಮಗೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ದಿನಕರ ದೇಸಾಯಿಯವರ ಸ್ಮರಣೆ ಒಂದು ದಿನದ ಸ್ಮರಣೆಯಾಗದೇ ನಿತ್ಯ ನಿರಂತರವಾಗಿ ಅವರನ್ನು ಸ್ಮರಿಸುವಂತಹ ಕರ‍್ಯ ನಮ್ಮ ನಮ್ಮ ನಿಮ್ಮೆಲ್ಲರಿಂದ ಆಗಬೇಕೆಂದು ಕರೆ ನೀಡಿದರು.

    ವೇದಿಕೆಯಲ್ಲಿ ಕಸಾಪ ತಾಲೂಕು ಘಟಕದ ಕರ‍್ಯದರ್ಶಿ ಗುರುಶಾಂತ ಜಡೆಹಿರೇಮಠ, ಇ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಯಿನಿ ಸಕ್ಕುಬಾಯಿ, ಚಿತ್ರಕಲಾ ಶಿಕ್ಷಕ ಅಬ್ದುಲ್ ರಜಾಕ್ ಭಾಗವಾನ್ ಅವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅಬ್ದುಲ್ ರಜಾಕ್ ಭಾಗವಾನ್ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.

    ನಂತರ ವಿದ್ಯಾರ್ಥಿಗಳಿಂದ ಭಾವಗೀತೆ ಮತ್ತು ಚುಟುಕು ವಾಚನ ಕರ‍್ಯಕ್ರಮ ಜರುಗಿತು. ಪ್ರೌಢಶಾಲಾ ಶಿಕ್ಷಕ ಶಿವಾನಂದ ಸವಸುದ್ದಿ ಸ್ವಾಗತಿಸಿದ ಕರ‍್ಯಕ್ರಮಕ್ಕೆ ಉಪನ್ಯಾಸಕಿ ದೀಪಾ ಗಸ್ತಿ ವಂದಿಸಿದರು. ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯರಾದ ಎನ್.ಆರ್.ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಕಸಾಪ ತಾಲೂಕು ಘಟಕದ ಕೋಶಾಧ್ಯಕ್ಷರಾದ ಶ್ರೀಮಂತ ಮದರಿ, ಸುರೇಶ ಪಾಲನಕರ ಸಹಕರಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top