ಶಿರಸಿ: ಅಂಬಾಗಿರಿ ಶ್ರೀ ರಾಮಕೃಷ್ಣ ಕಾಳಿಕಾಮಠದ ಶ್ರೀ ಕಾಳಿಕಾ ಭವಾನಿ ದೇವಿಯ ಸನ್ನಿಧಿಯಲ್ಲಿ ಸೆ. 26 ರಿಂದ ಅ.5ರ ವರೆಗೆ ನವರಾತ್ರಿ ಉತ್ಸವ ಹಾಗೂ ಅ. 07 ರಂದು ಚಂಡೀಹವನವನ್ನು ಪ್ರತಿ ವರ್ಷದಂತ ವಿಜೃಂಭಣೆಯಿಂದ ಆಚರಿಸಲು ಶ್ರೀ ಗುರುದೇವತಾ ಅನುಜ್ಞೆಯಂತೆ ನಿಶ್ಚಯಿಸಲಾಗಿದೆ.
ಈ ಸಂದರ್ಭದಲ್ಲಿ ನವದುರ್ಗೆಯರ ಆರಾಧನೆ, ಸಪ್ತಶತಿ ಪಾರಾಯಣ, ರುದ್ರಾಭಿಷೇಕ, ಲಲಿತಾ ಸಹಸ್ರನಾಮ, ತ್ರಿಶತಿ ಕುಂಕುಮಾರ್ಚನೆ, ಸಾಯಂಕಾಲ ಅಂಗದ್ರಾವರಣ ಷೋಡಷೋಪಚಾರ ಸೇವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಅಲ್ಲದೇ ಮಾತೆಯರಿಂದ ಪ್ರತಿದಿನ ಕುಂಕುಮಾರ್ಚನೆ, ಹಾಗೂ ಪುರುಷರಿಂದ ಗಾಯತ್ರಿ ಜಪ ನಡೆಯಲಿದೆ.
ನವರಾತ್ರಿ ಸಂದರ್ಭದಲ್ಲಿ ಪ್ರತಿದಿನ ಸಾಯಂಕಾಲ 5 ಘಂಟೆಯಿಂದ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ವಿಶೇಷ ಕಾರ್ಯಕ್ರಮವಾಗಿ ಸೆ, 30 ರಂದು ಲಲಿತಾಪಂಚಮಿ ದಿನ ಸಂಜೆ 4 ರಿಂದ “ಯಕ್ಷಮಿತ್ರ ಮಂಡಳಿ ಅಂಬಾಗಿರಿ” ಇವರಿಂದ ಗೋಮಹಿಮ ತಾಳಮದ್ದಳೆ ಹಾಗೂ ಅ.2 ಭಾನುವಾರ ಸಂಜೆ 5.30 ರಿಂದ ಕುಮಾರಿ ನೇಹಾ ಹೆಗಡೆ ಬೆಂಗಳೂರು ಇವರಿಂದ ಭರತನಾಟ್ಯ ಏರ್ಪಡಿಸಲಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಲು ಪ್ರಕಟಣೆಯಲ್ಲಿ ಕೋರಿದೆ.