ಶಿರಸಿ: ತಾಲೂಕಿನ ಡಾ. ವೀಣಾಶ್ರೀ ಭಟ್ ಅವರು 2022-23 ನೇ ಸಾಲಿನ ವೈದ್ಯಕೀಯ ನೀಟ್ ಸುಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ (NEET-SS 2022) ರಾಷ್ಟ್ರಮಟ್ಟಕ್ಕೆ 11 ನೇ ರ್ಯಾಂಕ್ ಪಡೆದು ಸಾಧನೆ ಗೈದಿದ್ದಾರೆ.
ಡಾ. ವೀಣಾಶ್ರೀ ಮಕ್ಕಳ ತಜ್ಞರಾಗಿದ್ದು , ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ತಾಲೂಕಿನ ಹೆಗ್ಗರ್ಸಿಮನೆಯ ವೇ. ಮೂ.ಸತ್ಯನಾರಾಯಣ ಭಟ್ ಮತ್ತು ದಾಕ್ಷಾಯಿಣಿ ಭಟ್ ಅವರ ಸುಪುತ್ರಿ. ಹಾಗೂ ಸಾಲೇಕೊಪ್ಪದ ಪಟೇಲರ ಮನೆಯ ಡಾ. ಶ್ರೀಶ ಮಂಜುನಾಥ ಹೆಗಡೆ (ಕಿಡ್ನಿ ತಜ್ಞರು) ಇವರ ಪತ್ನಿ.