ಶಿರಸಿ: ಸೇವಾ ಸಿಂಚನ ಟ್ರಸ್ಟ್ ಅಡಿಯಲ್ಲಿ ನಗರದ ಗಾಂಧಿನಗರ ಪದ್ಮಾವತಿ ಸಮಾಜ ಮಂದಿರದಲ್ಲಿ ಮಹಿಳೆಯರಲ್ಲಿ ಉಂಟಾಗಬಹುದಾದ ವಯೋಸಹಜ ಸಮಸ್ಯೆಗಳ ಕುರಿತು ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆಯ ಮಾಜಿ ಅಧ್ಯಕ್ಷೆ ಮೋಹಿನಿ ಬೈಲೂರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಪೂರ್ಣಿಮಾ ಎಸ್.ಬಿ. ಮಾತನಾಡಿ, ಮಹಿಳೆಯರಲ್ಲಿ ಉಂಟಾಗಬಹುದಾದ ವಯೋಸಹಜ ಬದಲಾವಣೆಗಳು, ಆ ಸಮಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳು ಮತ್ತು ಪರಿಹಾರದ ಕುರಿತು ಮತ್ತು ಇಂದಿನ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಪಿಸಿಒಡಿ ಸಮಸ್ಯೆಗಳ ಮಾಹಿತಿ ನೀಡಿದರು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಆಹಾರ ಪದ್ಧತಿ, ವಾತ, ಪಿತ್ತ, ಕಫ, ಸಕ್ಕರೆ ಕಾಯಿಲೆ, ಬಿಪಿ ಮೆನೋಪಾಸ್ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು ತಮ್ಮ ಸಮಸ್ಯೆಗಳ ಕುರಿತು ಚರ್ಚಿಸಿದರು. ಟ್ರಸ್ಟ್ ಅಧ್ಯಕ್ಷೆ ಸುಮಾ ಉಗ್ರಾಣಕರ್ ಮಾತನಾಡಿ, ಟ್ರಸ್ಟ್ ನಡೆದುಬಂದ ದಾರಿ, ಕೈಗೊಂಡ ಕಾರ್ಯಕ್ರಮಗಳನ್ನ ವಿವರಿಸಿ ಸ್ವಾಗತ ಕೋರಿದರು. ಅನ್ವಿತಾ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಪವಿತ್ರಾ ಹೊಸೂರು ನಿರೂಪಿಸಿದರು. ಶ್ವೇತಾ ನಾಯ್ಕ ವಂದಿಸಿದರು.
ಕಾರ್ಯಕ್ರಮದಲ್ಲಿ ಶಕುಂತಲಾ ಜೈವಂತ, ಲತಾ ಕೆರೇಕರ್, ವಿನುತಾ ಪಾಟೀಲ್, ವಿಮಲಾ ಅಂಕೊಲೇಕರ, ನ್ಯಾನ್ಸಿ ನರೋನಾ, ಪೂಜಾ ವೈದ್ಯ, ರುಕ್ಮಿಣಿ ಪಾಂಡುರಂಗ, ಶ್ವೇತ ನಾಯ್ಕ, ಗೌತಮಿ ಕೆರೆಮನೆ ಸೇರಿದಂತೆ ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರು ಕಾರ್ಯಕ್ರಮದಲ್ಲಿದ್ದರು.