ಕಾರವಾರ: ಸ್ವಾಧಾರ ಕೇಂದ್ರಕ್ಕೆ ಬರುವಂತಹ ನೊಂದ ಮಹಿಳೆಗೆ ಸ್ವಾಧಾರ ಕೇಂದ್ರದಲ್ಲಿ ದೊರುಕುವಂತಹ ಸೌಲಭ್ಯಗಳು ಹಾಗೂ ಕೌಟುಂಬಿಕ ಕಾಯ್ದೆಯಡಿಯಲ್ಲಿ ಬರುವಂತಹ ಮಹಿಳೆಯರಿಗೆ ಖಾಸಗಿ ವಕೀಲರನ್ನು ನೇಮಿಸಿಕೊಳ್ಳುಲು ಆಗದೆ ಇರುವಂತ ಸಂದರ್ಭದಲ್ಲಿ ಕಾನೂನು ಪ್ರಾಧಿಕಾರದಿಂದ ಸಿಗುವಂತಹ ಸೌಲಭ್ಯಗಳು ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಮಯಲ್ಲೆöÊ ಮುಗಿಲನ್ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಭಾಭವನದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮತನಾಡಿದ ಅವರು, ಕೌಟುಂಬಿಕ ದೌರ್ಜನ್ಯ ಹಾಗೂ ಇನ್ನಾವುದೆ ಕಿರುಕುಳದಿಂದ ನೊಂದು ಬಂದಂತಹ ಮಹಿಳೆಯರಿಗೆ ಸಾಂತ್ವನ ನೀಡುವುದಷ್ಟೆ ಅಲ್ಲದೆ ಸಾಮಾಜಿಕವಾಗಿ ಅವರಿಗಿರುವಂತಹ ಹಕ್ಕುಗಳ ಬಗ್ಗೆ ಮಾಹಿತಿ ನೀಡಬೇಕು ಮತ್ತು ಸಿಡಿಪಿಓ ಅಧಿಕಾರಿಗಳು ಖಾಯಂ ವೇಳಾಪಟ್ಟಿ ನಿಗದಿ ಪಡಿಸಿ ಆಯಾ ತಾಲೂಕುಗಳಿಗೆ ವಾರಕ್ಕೊಮ್ಮೆ ಬೇಟಿ ನೀಡಿ ನೋಂದ ಮಹಿಳೆಯರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಹೇಳಿದರು.
ಸಮಾಜದಲ್ಲಿ ಯಾವುದೇ ಆಧಾರವಿಲ್ಲದೆ ಹಾಗೂ ನಿರ್ಗತೀಕ ಮಹಿಳೆಯರ ಪ್ರಕರಣಗಳು ಪೊಲೀಸ ಠಾಣೆಯಲ್ಲಿ ದಾಖಲಾಗಿದ್ದರೆ ಕೂಡಲೇ ಸ್ವಾಧಾರ ಗೃಹಕ್ಕೆ ಸಂಪರ್ಕಿಸಬೇಕು ಎಂದು ಪೊಲೀಸ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಟದ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕಿಯರು, ಹಾಗೂ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಗ್ರಾಮ ಪಂಚಾಯತ್ ಹಾಗೂ ಶಾಲೆಗಳಿಗೆ ಗೆ ಬೇಟಿ ನೀಡಿ ಮಕ್ಕಳ ಸಾಗಣಿಕೆ ತಡೆಯುವ ಜಾಗೃತಿ ಮತ್ತು ಮಾನವ ಕಳ್ಳ ಸಾಗಣಿಕೆ ತಡೆ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಾರವಾರ ಸರಕಾರಿ ಪದವಿ ಪೂರ್ವ ಕಾಲೆಜಿನಲ್ಲಿ ಮಾನವ ಕಳ್ಳ ಸಾಗಣಿಕೆ ಪತಿಜ್ಞಾ ವಿಧಿ ಹಾಗೂ ಜಗೃತಿ ಕಾರ್ಯಕ್ರವನ್ನು ಹಮ್ಮಿಕೊಳ್ಳಯಿತು ಎಂದು ವರದಿ ನೀಡಿದರು.
ಬಾಣಂತಿಯರಿಗೆ ಹಾಗೂ ಗರ್ಭಿಣಿಯರಿಗೆ ನೀಡಲಾಗುತ್ತಿರುವ ಮಾತೃಪೂರ್ಣ ಯೋಜನೆಯೂ ಜಿಲ್ಲೆಯಲ್ಲಿ ಮನೆಗಳು ಅಂಗನವಾಡಿ ಕೇಂದ್ರಗಳಿಂದ ದೂರ ಇರುವುದರಿಂದ ಹಾಗೂ ಗುಡ್ಡಗಾಡು ಪ್ರದೇಶ ಕೂಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಿರಾಕರಿಸುತ್ತಿರುವುದರಿಂದ ಸರ್ಕಾರದ ಆದೇಶದಂತೆ ಫಲಾನುಭವಿಗಳ ಮನೆಗೆ ತಲುಪಿಸುವಂತಾಗಬೇಕು ಮತ್ತು ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿಯಲ್ಲಿ ಗರ್ಭಿಣಿ, ಬಾಣಂತಿಯರಿಗೆ ತಲಾ 5000 ಸಾವಿರದಂತೆ ಮೂರು ಕಂತುಗಳಲ್ಲಿ ವರ್ಗಾವಣೆ ಮಾಡಲಾಗುತ್ತಿದ್ದು, ಈ ಮೂರು ಹಂತದಲ್ಲಿ ಅರ್ಜಿ ಸಲ್ಲಿಸುವುದಕಿಂತ ಒಂದೆ ಸಲ ಅರ್ಜಿ ಸಲ್ಲಿಸುವ ತರಹ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿ ಸೂಚಿಸಿದರು. ದುರಸ್ಥಿಯಲ್ಲಿರುವಂತಹ ಅಂಗನವಾಡಿ ಕೇಂದ್ರಗಳು, ಸ್ಥಳ ಹಾಗೂ ಬೇಕಾಗುವಂತಹ ವಸ್ತುಗಳ ಕುರಿತು ಪಟ್ಟಿ ಮಾಡಿ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೀಯಾಂಗಾ ಎಂ, ಕಾನೂನು ಸೇವಾ ಪ್ರಾಧಿಕಾರಿ ಅಧಿಕಾರಿ ರೇಣುಕಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶ್ಯಾಮಲಾ ಸಿ.ಕೆ, ಸಿ.ಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶರದ್ ನಾಯಕ್, .ಪಿ.ಒ ಅಧಿಕಾರಿಗಳು, ಸ್ವಾಧಾರ ಗೃಹ ಅಧಿಕಾರಿಗಳು ಹಾಗೂ ಇನ್ನಿತರರು ಇದ್ದರು.