ಕುಮಟಾ: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ತಾಲೂಕು ಶಾಖೆ ವತಿಯಿಂದ ನಿರ್ಮಲಾ ಕಾನ್ವೆಂಟ್‌ನಲ್ಲಿ ಹದಿಹರೆಯ ವಯೋಮಾನದ ಮಕ್ಕಳಲ್ಲಿ ಉಂಟಾಗುವ ತಲ್ಲಣಗಳ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಹದಿಹರೆಯ ಅವಧಿಯಲ್ಲಿ ಮಕ್ಕಳಲ್ಲಿ ದೈಹಿಕ, ಭಾವನಾತ್ಮಕ, ಸಾಮಾಜಿಕ, ಮಾನಸಿಕ ಬದಲಾವಣೆ ಉಂಟಾಗುವುದರ ಜೊತೆಗೆ ಕೋಪ, ನಿರಾಶೆ, ಆಧುನಿಕತೆಗಳ ತುಮುಲ, ಕಲಿಕೆಯಲ್ಲಿ ಉಂಟಾಗುವ ತೊಂದರೆಗಳು, ಬೇಸರ, ಪ್ರೀತಿಯ ಕೊರತೆ, ದುಖಃ, ಮೇಲರಿಮೆ, ಕೀಳರಿಮೆ, ಕಂಪ್ಯೂಟರ್ ಗೀಳು, ನೈತಿಕ ದ್ವಂದ್ವಗಳು, ನಕಾರಾತ್ಮಕ ಧೋರಣೆ, ಅನಗತ್ಯ ತೊಡಕುಗಳಲ್ಲಿ ಸಿಲುಕಿಕೊಳ್ಳುವುದು ಹದಿಹರೆಯದ ಲಕ್ಷಣ ಎಂದು ಕಾರ್ಯಕ್ರಮದ ಉಪನ್ಯಾಸಕರದ ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ ಕುಮಟಾ ಬ್ರಾಂಚ್‌ನ ಆಡಳಿತ ಮಂಡಳಿಯ ಸದಸ್ಯರಾದ ರೇಖಾ ಯಲಿಗಾರರವರು ಉಪನ್ಯಾಸ ನೀಡಿದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾದ ಬೆಳವಣಿಗೆಯ ಹಂತ & ಲಭಿಸುವ ಸೇವೆಗಳ ಕುರಿತು ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ ಶಾಖೆಯ ಕಾರ್ಯಕ್ರಮಾಧಿಕಾರಿ ಮಂಜುಳಾ ಗೌಡ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಾಧ್ಯಾಪಕ ಐರಿನ್ ಅಧ್ಯಕ್ಷೀಯ ಮಾತನಾಡಿದರು. ಶಿಕ್ಷಕವೃಂದದವರು ಉಪಸ್ಥಿತರಿದ್ದರು.