ಶಿರಸಿ : ನಗರದ ಪ್ರತಿಷ್ಠಿತ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘ ನಿ. ಶಿರಸಿ. ಇದರ 2021-22 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯು ಸೆ.21 ಬುಧವಾರ ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿತು.
ಬೆಳಿಗ್ಗೆ 10:30 ಗಂಟೆಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ಸಂಘದ ವಿಶೇಷಾಧಿಕಾರಿ ಸುನೀಲ, ಅನಿಲಕುಮಾರ ತೇಲಕರ ವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ವಸಂತ ಶೆಟ್ಟಿ ಸಭೆಗೆ ಆಗಮಿಸಿದ ಸದಸ್ಯರನ್ನು ಸ್ವಾಗತಿಸಿದರು ಹಾಗೂ 21 ನೇ ವರ್ಷದ ಆಢಾವ ಪತ್ರಿಕೆ, ಲಾಭ ಹಾನಿ ಹಾಗೂ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ದಿ. ವಸಂತ ಶೆಟ್ಟಿಯವರ “ಕನಸಿನ ಕೂಸು” ಈ ಸಂಘ 02-08-2001 ರಂದು ಆರಂಭಗೊಂಡು 21 ವರ್ಷಗಳನ್ನು ಪೂರೈಸಿ ಉತ್ತಮ ವ್ಯವಹಾರ ನಡೆಸಿ ಪ್ರಗತಿ ಸಾಧಿಸಿದ್ದು, ಸಂಘದ ಪ್ರಗತಿಗೆ ಸದಸ್ಯರೆಲ್ಲರ ಉತ್ತಮ ಸಹಕಾರವೇ ಮುಖ್ಯ ಎಂದು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ವ್ಯವಹಾರದಲ್ಲಿನ ತೀವ್ರ ಪೈಪೋಟಿಯಲ್ಲೂ ಸಂಘ ಉತ್ತಮ ಪ್ರಗತಿ ಸಾಧಿಸಿದ್ದು, ಇದಕ್ಕೆಲ್ಲ ಕಾರಣರಾದ ಸದಸ್ಯರು, ಹಿತೈಷಿಗಳು, ಅಭಿಮಾನಿ ಗ್ರಾಹಕರು, ಹಾಗೂ, ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷವಾಗಿ ಸಂಘದ ಅಭಿವೃದ್ಧಿಯಲ್ಲಿ ಭಾಗಿಯಾದ ಸರ್ವರನ್ನು ಸಂಘದ ಪರವಾಗಿ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.
ಸಂಘ ಪ್ರಾರಂಭದಿಂದಲೂ ಲಾಭದಲ್ಲಿ ಮುಂದುವರಿದಿದ್ದು 2021-22 ನೇ ಸಾಲಿಗೆ ಶೇ 11 ಲಾಭಾಂಶ ವಿತರಣೆಗೆ ಶಿಫಾರಸು ಮಾಡಲಾಗಿದ್ದು ಸಾಲ ವಸೂಲಾತಿ ಪ್ರಮಾಣ 88.9 ಆಗಿದೆ ಎಂದು ಸಭೆಗೆ ವಿವರಿಸಿದರು.
ಸರ್ವಸಾಧಾರಣ ಸಭೆಯಲ್ಲಿ ಚರ್ಚಿಸತಕ್ಕ ವಿಷಯಗಳ ಬಗ್ಗೆ ಉತ್ತಮ ಚರ್ಚೆ ನಡೆದು, ಎಲ್ಲ ವಿಷಯಗಳು ಅನುಮೊದನೆಗೊಂಡವು. ಸಭೆಯಲ್ಲಿ ಸಂಘದ ಮಾಜಿ ಉಪಾಧ್ಯಕ್ಷ ಶ್ರೀಧರ ಎಚ್ ಮೊಗೇರ, ಅಂತರಿಕ ಸಲಹೆಗಾರ ಪಿ. ಡಿ ಮದ್ಗುಣಿ ಉಪಸ್ಥಿತರಿದ್ದರು.