Slide
Slide
Slide
previous arrow
next arrow

ಸೇವಾ ಪಾಕ್ಷಿಕ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

300x250 AD

ಸಿದ್ದಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದಿಂದ ನಡೆಯುತ್ತಿರುವ ಸೇವಾ ಪಾಕ್ಷಿಕದ ಅಂಗವಾಗಿ ‘ಸ್ವಚ್ಛತಾ ಕಾರ್ಯಕ್ರಮ’ವನ್ನು ತಾಲೂಕಿನ ಅಣಲೇಬೈಲ್ ಮಹಾಶಕ್ತಿಕೇಂದ್ರದಲ್ಲಿ ಆಯೋಜಿಸಲಾಯಿತು.

ಈ ವೇಳೆ ಹೆಗ್ಗರಣಿಯ ಶ್ರೀಕಟ್ಟೆಬೀರಪ್ಪ ದೇವಸ್ಥಾನದ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಸೇವಾ ಚಟುವಟಿಕೆಯ ಮೂಲಕ ಮೋದಿಯವರಿಗೆ ಜನ್ಮದಿನದ ಶುಭಾಶಯವನ್ನು ಕೋರಲು 15 ದಿನಗಳ ಕಾಲ ವಿವಿಧ ಸೇವಾ ಕಾರ್ಯಕ್ರಮಗಳನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

ಸೆ.17ರAದು ಮೋದಿಯವರ ಜನ್ಮದಿನದಂದು ದೇಶದಲ್ಲಿ 1.07 ಲಕ್ಷ ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದು, ಭಾರತವು ವಿಶ್ವದಾಖಲೆ ನಿರ್ಮಿಸಿದೆ ಎಂದರು. ವಿಶೇಷವಾಗಿ ಬಿಜೆಪಿ ಯುವಮೋರ್ಚಾ ರಕ್ತದಾನ ಶಿಬಿರದ ಆಯೋಜನೆ ಮಾಡಿದ್ದು, ಜಿಲ್ಲೆಯಲ್ಲಿ ಐದು ರಕ್ತದಾನ ಶಿಬಿರಗಳು ನಡೆದಿವೆ ಎಂದರು. ಭಾರತೀಯ ಜನತಾ ಪಾರ್ಟಿಯು ಸೇವಾಹೀಸಂಘಟನ್ ಪೋರ್ಟಲ್ ಮೂಲಕ ರಕ್ತದಾನಿಗಳ ನೋಂದಣಿ ಮಾಡುತ್ತಿದೆ, ಅಲ್ಲದೇ ಸರ್ಕಾರವು ಈ-ರಕ್ತಕೋಶ ಎಂಬ ಯ್ಯಾಪ್ ಮೂಲಕ ರಕ್ತದಾನಿಗಳ ನೋಂದಣಿಗೆ ಅವಕಾಶ ಕಲ್ಪಿಸಿದೆ ಎಂದರು.

300x250 AD

ಸ್ವಚ್ಚತಾ ಕಾರ್ಯಕ್ರಮದಲ್ಲಿ ಅಣಲೇಬೈಲ್ ಮಹಾಶಕ್ತಿಕೇಂದ್ರ ಅಧ್ಯಕ್ಷ ನಾರಾಯಣ ಹೆಗಡೆ ಚಾರೆಕೋಣೆ, ಶ್ರೀಮನ್ನೆಲೆಮಾವು ಮಠದ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು, ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಗೌಡ, ಗಣೇಶ ಎನ್ ಹೇರೂರು, ಹೆಗ್ಗರಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಾ ರಾವ್, ಹಸರಗೋಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೌರಿ ಅಣ್ಣಪ್ಪ ಗೌಡ, ರವಿ ಹಿರೇಹದ್ದ, ಎಸ್.ಎ.ಹೆಗಡೆ ಜೋಗಿನಮನೆ, ಬಾಲಚಂದ್ರ ಹೆಗಡೆ, ಪ್ರದೀಪ ಹೆಗಡೆ ಕರ್ಜಗಿ, ನವೀನ ತಾರೇಸರ, ಮಧುರಾ ಭಟ್, ಮಹೇಶ ಗೌಡ, ರಾಜೀವ ಭಾಗ್ವತ್, ಹರಿಹರ ನಾಯ್ಕ, ದೇವರು ಹೆಗಡೆ, ಪರಮೇಶ್ವರ ಹೆಗಡೆ, ಎನ್.ಕೆ.ಭಟ್, ಗೋಪಾಲ ಹೆಗಡೆ, ನಾರಾಯಣ ಹೆಗಡೆ, ಮಧುಕರ ಹೆಗಡೆ, ಗಣೇಶ ಹೆಗಡೆ ಹಾಗೂ ಪಾರ್ಟಿಯ ಕಾರ್ಯಕರ್ತರು, ಹಿತೈಷಿಗಳು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿಮಾನಿಗಳು ಪಾಲ್ಗೊಂಡಿದ್ದರು.

ತಂಡಾಗುಂಡಿ ಶಕ್ತಿಕೇಂದ್ರದ ಹಿರೇಹದ್ದ-ಶಿವಳಮನೆ ಬಸ್ ತಂಗುದಾಣದ ಸ್ವಚ್ಚತೆ ಮಾಡಲಾಯಿತು. ಅಮೃತ ಸರೋವರ ಕಾರ್ಯಕ್ರಮದ ಭಾಗವಾಗಿ ಹೇರೂರಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಕೆರೆಯ ಕಟ್ಟೆಯಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು, ಹಾರ್ಸಿಕಟ್ಟಾ ಶಕ್ತಿಕೇಂದ್ರದ ಹಲಸಗಾರ ಕೆರೆಯ ಸ್ವಚ್ಛತೆಯನ್ನು ಮಾಡಿ ಅಲ್ಲಿನ ಕಾರ್ಯಕರ್ತರು ಅಮೃತ ಸರೋವರ ಕಾರ್ಯಕ್ರಮವನ್ನು ಆಚರಿಸಿದರು. ಮಧ್ಯಾಹ್ನ ಹೊಸಗದ್ದೆ ಶಕ್ತಿಕೇಂದ್ರದಲ್ಲಿ ಹಸರಗೋಡ ಗ್ರಾಮ ಪಂಚಾಯತ, ಆರೋಗ್ಯ ಕೇಂದ್ರ, ಗ್ರಂಥಾಲಯ ಹಾಗೂ ಅಂಗನವಾಡಿ ಕೇಂದ್ರವನ್ನು ಸ್ವಚ್ಛಗೊಳಿಸುವ ಮೂಲಕ ಸೇವಾ ಚಟುವಟಿಕೆಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

Share This
300x250 AD
300x250 AD
300x250 AD
Back to top