Slide
Slide
Slide
previous arrow
next arrow

‘ಹಿಂದೂ ಸುರಕ್ಷಿತ, ರಾಷ್ಟ್ರ ಸುರಕ್ಷಿತ’ ಚರ್ಚೆ,ಅಂತಿಮವಾಗಿ ಹಿಂದೂಗಳಿಗೇ ಜಯ : ನ್ಯಾಯವಾದಿ ವಿಷ್ಣು ಶಂಕರ ಜೈನ್

300x250 AD

ರಾಯಪುರ (ಛತ್ತೀಸ್‌ಗಢ) – ಪ್ರಭು ಶ್ರೀರಾಮಚಂದ್ರನ ಮತ್ತು ಎಲ್ಲಾ ದೇವ-ದೇವತೆಗಳ ಆಶೀರ್ವಾದ ನಮ್ಮೊಂದಿಗಿರುವುದರಿಂದ ಹಿಂದೂಗಳು ಭಯಪಡಬೇಕಾಗಿಲ್ಲ. ಪ್ರತಿಸಲ ಹೋರಾಡಲು ಶಸ್ತ್ರಗಳನ್ನು ಕೈಗೆತ್ತಿಕೊಳ್ಳುವ ಅಗತ್ಯವಿಲ್ಲ; ಕಾನೂನಾತ್ಮಕವಾಗಿ ಹೋರಾಟ ಮಾಡಿದರೂ ಹಿಂದೂಗಳಿಗೆ ಆಗಿರುವ ಅನ್ಯಾಯವನ್ನು ಹೋಗಲಾಡಿಸಬಹುದು. ಹಿಂದೂಗಳು ಬಹುಸಂಖ್ಯಾತರಾಗಲಿ ಅಥವಾ ಅಲ್ಪಸಂಖ್ಯಾತರಾಗಲಿ ಹಿಂದೂಗಳ ಪರ ಸತ್ಯವಿದೆ. ಹಾಗಾಗಿ ಹಿಂದೂಗಳು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿದರೆ ಅಂತಿಮ ಜಯ ಖಂಡಿತ ಹಿಂದೂಗಳಿಗೆ ಲಭಿಸಲಿದೆ’ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಇವರು ಪ್ರತಿಪಾದಿಸಿದರು. ಅವರು ‘ಹಿಂದೂ ಸುರಕ್ಷಿತ, ರಾಷ್ಟ್ರ ಸುರಕ್ಷಿತ’ ಕುರಿತಾದ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ‘ಅಖಿಲ ಭಾರತೀಯ ಹಿಂದೂ ಸ್ವಾಭಿಮಾನ ಸೇನಾ’, ‘ಮಿಶನ್ ಸನಾತನ’ ಮತ್ತು ‘ಹಿಂದೂ ಜನಜಾಗೃತಿ ಸಮಿತಿ’ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಚರ್ಚೆಯನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಶದಾನಿ ದರ್ಬಾರ್ ತೀರ್ಥದ ಒಂಭತ್ತನೇ ಪೀಠಾಧೀಶ ಪೂ. ಡಾ. ಯುಧಿಷ್ಠಿರಲಾಲಜಿ ಮಹಾರಾಜ, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಪೂ. ಅಶೋಕ ಪತ್ರಿಕರ, ಸುದರ್ಶನ ನ್ಯೂಸ್ ವಾಹಿನಿಯ ಪ್ರಧಾನ ಸಂಪಾದಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ. ಸುರೇಶ ಚವ್ಹಾಣಕೆ, ಹಿಂದೂ ಜನಜಾಗೃತಿ ಸಮಿತಿ ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯ ಸಂಘಟಕರಾದ ಶ್ರೀ. ಸುನೀಲ್ ಘನವಟ, ಅಖಿಲ ಭಾರತೀಯ ಹಿಂದೂ ಸ್ವಾಭಿಮಾನ ಸೇನೆಯ ಸಂಸ್ಥಾಪಕ ಶ್ರೀ. ಅಮಿತ ಚಿಮನಾನಿ ಇವರು ಉಪಸ್ಥಿತರಿದ್ದರು.

ಈ ವೇಳೆ ‘ಸುದರ್ಶನ ಚಾನೆಲ್’ನ ಮುಖ್ಯ ಸಂಪಾದಕ ಸುರೇಶ ಚವ್ಹಾಣಕೆಯವರು ಮಾತನಾಡುತ್ತಾ, ‘ಹಿಂದೂ ಎಂದರೆ ಏನು ?’, ‘ಹಿಂದುತ್ವ ಎಂದರೆ ಏನು?’ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಿಂದೂಗಳು ಸಂಘಟಿತರಾದಾಗ ಮತ್ತು ಹಿಂದೂ ರಾಷ್ಟ್ರವಾದಾಗ ಮಾತ್ರ ಹಿಂದೂಗಳು ನಿಜವಾದ ಅರ್ಥದಲ್ಲಿ ಸುರಕ್ಷಿತವಾಗಿರುತ್ತಾರೆ. ಇಂದು ಹಿಂದೂ ಮಹಿಳೆಯರು ಸುರಕ್ಷಿತವಾಗಿಲ್ಲ, ಹಿಂದೂ ಹುಡುಗಿಯರು ಸುರಕ್ಷಿತವಾಗಿಲ್ಲ, ಹಿಂದೂ ಸಂಪ್ರದಾಯಗಳು ಸುರಕ್ಷಿತವಾಗಿಲ್ಲ, ಹಿಂದೂ ಧರ್ಮ ಸುರಕ್ಷಿತವಾಗಿಲ್ಲ, ಅದಕ್ಕಾಗಿಯೇ ನಮಗೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕಾಗಿದೆ. ಹಿಂದೂಗಳಿಗೆ ಆಗುತ್ತಿರುವ ಅನ್ಯಾಯಗಳನ್ನು ಸುದರ್ಶನ ವಾಹಿನಿಯು ಯಾವಾಗಲೂ ಬಯಲಿಗೆಳೆಯುತ್ತಿದೆ. ಛತ್ತೀಸ್‌ಗಢದಲ್ಲಿ ಮತಾಂತರ ಮತ್ತು ಗೋಕಳ್ಳಸಾಗಾಣಿಕೆ ಗಂಭೀರ ಸಮಸ್ಯೆಗಳಾಗಿವೆ. ಇದನ್ನು ತಡೆಯಬೇಕಾದರೆ ರಾಜಕೀಯ ಪಕ್ಷ ಎಂದು ಯೋಚಿಸದೆ ಎಲ್ಲರೂ ಸಂಘಟಿತರಾಗಬೇಕು. ಒಬ್ಬ ವ್ಯಕ್ತಿ ಯಾವುದೇ ಪಕ್ಷಕ್ಕೆ ಸೇರಿರಬಹುದು; ಆದರೆ ಅವರು ಧರ್ಮ, ರಾಷ್ಟ್ರ ಮತ್ತು ಹಿಂದುತ್ವಕ್ಕಾಗಿ ಕಾರ್ಯ ಮಾಡುವುದನ್ನು ಮುಂದುವರಿಸಬೇಕು. ನಮಗೆ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಸಿಕ್ಕಿದೆ; ಆದರೆ ’ಅಯೋಧ್ಯಾ ತೋ ಎಕ ಘಾಂಕಿ ಹೆ, ಹಿಂದೂವೋಂ ಕೆ ಚಾರ ಮಂದಿರ ಬಾಕಿ ಹೆ !’ ಎಂದು ಹೇಳಿದರು.
ಈ ವೇಳೆ ಶದಾನಿ ದರ್ಬಾರ್‌ನ ಒಂಬತ್ತನೇ ಪೀಠಾಧೀಶ ಪೂ. ಯುಧಿಷ್ಠಿರ ಲಾಲಜಿ ಮಹಾರಾಜ ಇವರು ಹಿಂದೂಗಳು ಹೀಗೆಯೇ ಸಂಘಟಿತರಾದರೆ ಹಿಂದೂರಾಷ್ಟ್ರ ದೂರವಿಲ್ಲ. ಈ ಕಾರ್ಯದಲ್ಲಿ ಸಂತ ಸಮಾಜ ಮತ್ತು ಶದಾನಿ ದರ್ಬಾರ್ ಸದಾ ತಮ್ಮೊಂದಿಗೆ ಇರುತ್ತದೆ ಎಂದು ಮಹಾರಾಜರು ಎಲ್ಲರಿಗೂ ಭರವಸೆ ನೀಡಿದರು.

ಈ ವೇಳೆ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ಪೂ. ಅಶೋಕ ಪಾತ್ರಿಕ ಇವರು ಮಾತನಾಡುತ್ತಾ, ಹಿಂದೂಗಳ 33 ಕೋಟಿ ದೇವರುಗಳಿಗೆ ನಿರ್ದಿಷ್ಟ ಕಾರ್ಯವಿದೆ. ಧರ್ಮಕಾರ್ಯಗಳನ್ನು ಮಾಡಲು ಆಯಾ ದೇವತೆಗಳ ಅನುಗ್ರಹವನ್ನು ಪಡೆಯಲು ಎಲ್ಲರೂ ಉಪಾಸನೆ ಮಾಡುವುದು ಅಗತ್ಯವಿದೆ. ಹಿಂದೂ ಧರ್ಮದ ಮೇಲೆ ಹೆಚ್ಚುತ್ತಿರುವ ವಿವಿಧ ಜಿಹಾದಿ ತೊಂದರೆಗಳನ್ನು ತೊಡೆದುಹಾಕಲು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದು ಏಕೈಕ ಪರಿಹಾರವಾಗಿದೆ ಎಂದು ಹೇಳಿದರು.

ಇಂದು ‘ಹಲಾಲ್’ ಎಂಬ ಪದವು ಕೇವಲ ಪ್ರಾಣಿ ಮಾಂಸಕ್ಕೆ ಸೀಮಿತವಾಗಿಲ್ಲ, ಆಹಾರ, ಮಾಲ್‌ಗಳು ಮತ್ತು ಮೆಕ್‌ಡೊನಾಲ್ಡ್ಸ್‌ನಂತಹ ಅಂತರರಾಷ್ಟ್ರೀಯ ಕಂಪನಿಗಳು ‘ಹಲಾಲ್ ಪ್ರಮಾಣಪತ್ರ’ಗಳನ್ನು ಪಡೆಯುತ್ತಿವೆ. ‘ಹಲಾಲ್ ಪ್ರಮಾಣಪತ್ರ’ ನೀಡುವ ಸಂಸ್ಥೆಗಳು ಭಯೋತ್ಪಾದಕ ಚಟುವಟಿಕೆಗಳಿಗಾಗಿ ಬಂಧಿತ ಉಗ್ರರಿಗೆ ಕಾನೂನು ನೆರವು ನೀಡುತ್ತಿವೆ. ಆದ್ದರಿಂದ ನಾವು ‘ಹಲಾಲ್ ಪ್ರಮಾಣೀಕೃತ’ ಉತ್ಪನ್ನಗಳನ್ನು ಬಹಿಷ್ಕರಿಸಬೇಕು. ಈ ವರ್ಷ ರಾಜ್ಯದಲ್ಲಿ ‘ಹಲಾಲಮುಕ್ತ ದೀಪಾವಳಿ’ಯನ್ನು ಆಚರಿಸಲು ನಿರ್ಧರಿಸೋಣ ಎಂದು ಹಿಂದೂ ಜನಜಾಗೃತಿ ಸಮಿತಿ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕ ಶ್ರೀ. ಸುನಿಲ್ ಘನವಟ ಇವರು ಕರೆ ನೀಡಿದರು.

300x250 AD

ಹಿಂದುತ್ವದ ಕಾರ್ಯಕ್ರಮವು ಕೇವಲ ರಾಜಕೀಯ ಕಾರ್ಯಕ್ರಮ ಎಂದು ಎಲ್ಲರೂ ಭಾವಿಸುತ್ತಾರೆ; ಆದರೆ ಇಂದು ಕೇವಲ ಹಿಂದೂಗಳ ಇಂತಹ ಹಿಂದುತ್ವದ ಕಾರ್ಯಕ್ರಮ ಮಾಡಲು ಸಾಧ್ಯ ಎಂಬುದು ಸಾಬೀತಾಗಿದೆ. ಈಗ ನಾವು ‘ಗಢಬೊ ಹೊಸ ಛತ್ತೀಸ್‌ಗಢ’ ಎಂದು ಘೋಷಿಸುವ ಬದಲು ‘ಗಢಬೊ ಹಿಂದೂ ರಾಷ್ಟ್ರ ಛತ್ತೀಸ್‌ಗಢ’ ಎಂದು ಘೋಷಿಸಬೇಕು ಎಂದೂ ಸಹ ಶ್ರೀ. ಘನವಟ ಹೇಳಿದರು.
ಈ ವೇಳೆ ಅಖಿಲ ಭಾರತ ಹಿಂದೂ ಸ್ವಾಭಿಮಾನ ಸೇನೆಯ ಸಂಸ್ಥಾಪಕ ಶ್ರೀ. ಅಮಿತ ಚಿಮನಾನಿ ಇವರು ಮಾತನಾಡುತ್ತಾ, ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಮತ್ತು ಸುರೇಶ ಚವಾಣಕೆ ಅವರೊಂದಿಗೆ ಇಡೀ ಸಮಾಜ ಮತ್ತು ಇಡೀ ಛತ್ತೀಸ್‌ಗಢ ಇದೆ. ಛತ್ತೀಸ್‌ಗಢದ ಭೂಮಿ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಭೂಮಿಯಾಗಿದೆ. ಇದು ಸ್ವಾಮಿ ವಿವೇಕಾನಂದರ ಕರ್ಮಭೂಮಿಯಾಗಿದೆ. ಮಾತೆ ಕೌಸಲ್ಯದ ಜನ್ಮಸ್ಥಳವಾಗಿದೆ. ಈ ನೆಲದಿಂದ ಅನೇಕರಲ್ಲಿ ಶೌರ್ಯ ನಿರ್ಮಾಣವಾಗುತ್ತದೆ. ‘ಗರ್ವ ಸೇ ಕಹೋ ಹಮ್ ಹಿಂದೂ ಹೈ !’ ಎಂದು ಹೇಳುವ ಕೇಸರಿಯ ಶಕ್ತಿಯನ್ನು ನಾವು ಅರಿತುಕೊಳ್ಳಬೇಕು. ಹಿಂದೂಗಳಿಗೆ ಎಲ್ಲೇ ತೊಂದರೆಯಲ್ಲಿದ್ದರೆ ನಾವು ಅವರಿಗೆ ಸಹಾಯ ಮಾಡಬೇಕು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಚರ್ಚೆಯ ಉದ್ದೇಶವನ್ನು ಶ್ರೀ. ಮದನ ಮೋಹನ ಉಪಾಧ್ಯಾಯ ವಿವರಿಸಿದರು, ಶ್ರೀ. ಮದನ ಮೋಹನ ಉಪಾಧ್ಯಾಯ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸೌ. ಅನುಭೂತಿ ಟವಲಾರೆ ಇವರು ಕಾರ್ಯಕ್ರಮದ ಸೂತ್ರಸಂಚಾಲನೆ ಮಾಡಿದರು. ಕು. ಅರಾಯಾನಾ ಚಿಮನಾನಿ ಮತ್ತು ಕು. ವೈಷ್ಣವಿ ಉಪಾಧ್ಯಾಯ ಎಂಬ ಇಬ್ಬರು ಸಣ್ಣ ರಣರಾಗಿಣನಿಯರು ಹಾಡು ಮತ್ತು ಕವನಗಳ ಮೂಲಕ ಹಿಂದೂ ಧರ್ಮದ ರಕ್ಷಣೆಗೆ ಕಾರ್ಯ ಮಾಡುವಂತೆ ಹಿಂದೂ ಸಮಾಜಕ್ಕೆ ಕರೆ ನೀಡಿದರು. ಈ ಸಂದರ್ಭದಲ್ಲಿ ವಕ್ತಾರರ ಗೌರವ ಚಿಹ್ನೆಗಳನ್ನು ನೀಡಿ ಸನ್ಮಾನಿಸಲಾಯಿತು ಹಾಗೂ ಹಿಂದುತ್ವನಿಷ್ಠ ಪದಾಧಿಕಾರಿಗಳನ್ನು ಶ್ರೀ. ಸುರೇಶ ಚವಾಣಕೆ ಇವರ ಹಸ್ತದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಹಿಂದೂ ಸ್ವಾಭಿಮಾನ ಸೇನೆ, ಮಿಶನ ಸನಾತನ, ಹಿಂದೂ ಜನಜಾಗೃತಿ ಸಮಿತಿ, ವಿಶ್ವ ಹಿಂದೂ ಪರಿಷತ್ತು, ಬಜರಂಗ ದಳ, ಶದಾನಿ ದರ್ಬಾರ, ಸನಾತನ ಸಂಸ್ಥೆ ಹೀಗೆ ನಾನಾ ಸಂಘಟನೆಗಳ ೮೦೦ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಅಯೋಧ್ಯಾ ತೋ ಎಕ ಘಾಂಕಿ ಹೈ, ಹಿಂದೂವೋಂ ಕೆ ಚಾರ ಮಂದಿರ ಬಾಕಿ ಹೆ ! – ಶ್ರೀ. ಸುರೇಶ ಚಾವ್ಹಾಣಕೆ

‘ಹಲಾಲ್ ಮುಕ್ತ ದೀಪಾವಳಿ’ ಆಚರಿಸಲು ಸಂಕಲ್ಪ ಮಾಡಿ ! – ಶ್ರೀ. ಸುನಿಲ ಘನವಟ

Share This
300x250 AD
300x250 AD
300x250 AD
Back to top