• Slide
    Slide
    Slide
    previous arrow
    next arrow
  • ಸ್ನೇಹಸಾಗರ ಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣಾ ಶಿಬಿರ

    300x250 AD

    ಯಲ್ಲಾಪುರ: ಸ್ನೇಹಸಾಗರ ಪ್ರತಿಷ್ಠಾನ(ರಿ) ಹಾಗೂ ಸ್ನೇಹಸಾಗರ ವಸತಿ ಶಾಲೆಯ ಸಹಯೋಗದ ಜೊತೆಗೆ ರಾಷ್ಟೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಸ್ನೇಹಸಾಗರ ಶಾಲೆಯ ಆವರಣದಲ್ಲಿ ಆರೋಗ್ಯ ತಪಾಸಣಾ ಶಿಬಿರ ಕೈಗೊಳ್ಳಲಾಯಿತು. ಆರೋಗ್ಯ, ಸ್ವಚ್ಚತೆ, ಮತ್ತು ನೈರ್ಮಲ್ಯದ ಕಾಳಜಿ ನಿಮಿತ್ತ ಸ್ನೇಹಸಾಗರದ ಶಾಲಾ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ನಡೆಸಿ ಆರೋಗ್ಯದ ಮಾರ್ಗದರ್ಶನವನ್ನು ನೀಡಲಾಯಿತು.
    ಶೈಕ್ಷಣಿಕ ಕಾರ್ಯದ ಹೊರತಾಗಿ ಸಮಾಜದ ವಿವಿದ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಮರ್ಪಣಾ ಭಾವನೆಯಿಂದ ತೊಡಗಿಕೊಳ್ಳಲು ಸ್ನೇಹಸಾಗರ ಪ್ರತಿಷ್ಠಾನ ರೂಪುಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಇದರ ಅಡಿಯಲ್ಲಿ ಗೋಶಾಲೆ, ಜನಪದ ಶಿಕ್ಷಣ, ವಿದ್ಯಾರ್ಥಿ ವೇತನ, ಕ್ರೀಡಾ ತರಬೇತಿ, ಸಂಸ್ಕೃತ ವೇದ ಶಿಬಿರ, ಕೌಟುಂಬಿಕ ಆಪ್ತ ಸಮಾಲೋಚನೆ, ವೈದ್ಯಕೀಯ ಸೇವೆ, ಪ್ರಕೃತಿ ವಿಕೋಪಕ್ಕೆ ಒಳಗಾದವರಿಗೆ ಸೂಕ್ತ ಪರಿಹಾರ, ಅನಾಥ ಮತ್ತು ವೃದ್ಧಾಶ್ರಮಗಳ ಕಾಳಜಿ, ಸಾರ್ವಜನಿಕರಿಗೆ ಸದುಪಯೋಗವಾಗುವಂತಹ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಪ್ರವೃತ್ತವಾಗಿದೆ. ಆ ನಿಟ್ಟಿನಲ್ಲಿ ಇಂದು ಸ್ನೇಹಸಾಗರ ಪ್ರತಿಷ್ಠಾನ ವತಿಯಿಂದ ಈ ಉತ್ತಮ ಕಾರ್ಯ ನೇರವೇರಿದೆ. ಇಂತಹ ಕಾರ್ಯದಲ್ಲಿ ಸಮಾನ ಮನಸ್ಕವುಳ್ಳ ಸೇವಾಭಾಗಿಗಳು ಸ್ನೇಹಸಾಗರವನ್ನು ಸಂಪರ್ಕಿಸಿ, ಧನ ಸಹಾಯವನ್ನು ಪ್ರತಿಷ್ಠಾನದ ಖಾತೆಗೆ ಸಲ್ಲಿಸಿ, ಸೇವಾಕಾರ್ಯಗಳಲ್ಲಿ ತೊಡಗಿ ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಶಾಲೆಯ ವ್ಯವಸ್ಥಾಪಕರಾದ ಎಸ್.ಎಲ್ ಭಟ್ ಅವರು ತಿಳಸಿದರು.

    ಶಾಲಾ ನಿರ್ದೇಶಕರಾದ ವಿನಾಯಕ ಹೆಬ್ಬಾರ್, ಆಡಳಿತಾದಿಕಾರಿ ಎನ್. ಎ ಭಟ್, ಸಹಶಿಕ್ಷರು, ಮತ್ತು ಶಾಲಾ ಸಿಬ್ಭಂದಿ ವರ್ಗದವರು ಶಿಬಿರದ ಚಟುವಟಟಿಕೆಯಲ್ಲಿ ಭಾಗಿಗಳಾಗಿದ್ದರು. ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯ ವಿಶೇಷ ವೈದ್ಯಾಧಿಕಾರಿಗಳಾದ ಡಾ. ಕಲ್ಲೇಶ್ ಪಾಟೀಲ್, ಡಾ. ಜ್ಯೋತಿ ಅವರು ಸಹಾಯಕ ಸಿಬ್ಭಂದಿಗಳ ಜೊತೆಗೆ ದೃಷ್ಟಿ ತಪಾಸಣೆಯ ಕಾರ್ಯವನ್ನು ಅಚ್ಚುಕಟ್ಟಾಗಿ ನೆರವೇರಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top