Slide
Slide
Slide
previous arrow
next arrow

ಕ್ರೀಡಾಕೂಟ: ಲಯನ್ಸ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

300x250 AD

ಶಿರಸಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕರ‍್ಯಾಲಯ ಶಿರಸಿ, ಶೈಕ್ಷಣಿಕ ಜಿಲ್ಲೆ ಶಿರಸಿ (ಉ.ಕ) ಇವರ ಸಹಯೋಗದಲ್ಲಿ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾದ 2022-23ನೇ ಸಾಲಿನ ಕ್ರೀಡಾಕೂಟದಲ್ಲಿ ಅಭೂತಪೂರ್ವ ಸಾಧನೆ ಮಾಡಿ ವಿಭಾಗ ಮಟ್ಟ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಹೆಣ್ಣು ಮಕ್ಕಳ ಎತ್ತರ ಜಿಗಿತ ಹಾಗೂ ಉದ್ದ ಜಿಗಿತ ಸ್ಪರ್ಧೆಯಲ್ಲಿ ಕುಮಾರಿ ತನುಶ್ರೀ ಟಿ. ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಯಲ್ಲಾಪುರದ ವಾಯ್.ಟಿ.ಎಸ್.ಎಸ್. ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಗಂಡು ಮಕ್ಕಳ ಚೆಸ್ ಸ್ಪರ್ಧೆಯಲ್ಲಿ ಕು.ಅಭಿನಿತ್ ಭಟ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಹೆಣ್ಣು ಮಕ್ಕಳ ಯೋಗಾಸನ ಸ್ಪರ್ಧೆಯಲ್ಲಿ ಕುಮಾರಿ ಆಶ್ರೀತಾ ಹೆಗಡೆ ಪ್ರಥಮ ಸ್ಥಾನವನ್ನು ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಥ್ರೋ ಬಾಲ್ ತಂಡದ ಕುಮಾರಿ. ಸಮೀಕ್ಷಾ ರಾಯ್ಕರ್, ವಸುನಿತಾ ಕಬ್ಬೇರ್, ವನ್ಯಾ ಹೆಗಡೆ, ಭೂಮಿಕಾ ಜಿ. ಟಿ, ಅನನ್ಯಾ ದೇವಾಡಿಗ, ಕೀರ್ತನಾ ಗೌಡ, ಯೋಗಿತಾ ಮೋದಿ, ಶ್ರಾವ್ಯ ಎಸ್. ಕೆ, ಶ್ರಾವ್ಯಾ ಎಚ್. ಆರ್, ಗೌತಮಿ ನಾಯ್ಕ, ಅಧಿತಿ ನಾಯ್ಕ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕಿಯಾದ ಶ್ರೀಮತಿ ಚೇತನಾ ಪಾವಸ್ಕರ್ ತರಬೇತಿ ನೀಡಿದ್ದಾರೆ.
ಪ್ರೌಢಶಾಲಾ ವಿಭಾಗದ ತಾಲೂಕಾ ಮಟ್ಟದ ಕ್ರೀಡಾಕೂಟ ಬಾಲಕಿಯರ ಗುಂಡು ಎಸೆತ ಸ್ಪರ್ಧೆಯಲ್ಲಿ ಕುಮಾರಿ. ಶ್ರೀಲಕ್ಷ್ಮೀ ಹೆಗಡೆ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಟೆಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಕುಮಾರಿ. ತೈಬಾ ತಬಸುವ, ಶ್ರೀಲಕ್ಷ್ಮೀ ಹೆಗಡೆ, ಸ್ತುತಿ ತುಂಬಾಡಿ, ರಕ್ಷಾ ಕಾಮತ್, ಶುಭಾ ಗುಡಿಗಾರ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗುಂಪು ಆಟವಾದ ಬಾಲಕಿಯರ ಥ್ರೋ ಬಾಲ್ ಸ್ಪರ್ಧೆಯಲ್ಲಿ ಕುಮಾರಿ. ಶುಭಾ ಗುಡಿಗಾರ, ಶ್ರೀಲಕ್ಷ್ಮೀ ಹೆಗಡೆ, ಸಿಂಧೂ ಗಾಂವಕರ್, ಸಿಂಚನಾ ರಾಯ್ಕರ್, ಅರ್ಪಿತಾ ಹಲ್ಲೂರು, ನಾಗರತ್ನ ಪಟಗಾರ, ಪ್ರತೀಕ್ಷಾ ರಾಯ್ಕರ್, ನಿಶಾತ್ ಶುಂಠಿ, ತೈಬಾ ತಬಸುಮ್, ಶೃದ್ಧಾ ವಿಠ್ಠಲ್‌ಕರ್, ಸಾಂಚಿ ಲೋಕಂಡೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ನಾಗರಾಜ ಜೋಗಳೇಕರ್ ತರಬೇತಿಯನ್ನು ನೀಡಿದ್ದಾರೆ. ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಹಾಗೂ ಮೆಡಲ್ ತಮ್ಮದಾಗಿಸಿಕೊಂಡು ಶಾಲೆಯ ಕೀರ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಕ್ರೀಡಾರಂಗದಲ್ಲಿ ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ಬಾಂದವರು, ಶಿರಸಿ ಲಯನ್ಸ್ ಕ್ಲಬ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top