Slide
Slide
Slide
previous arrow
next arrow

ಶಾಂತಿಕಾ ಪರಮೇಶ್ವರಿಗೆ ವಿಜೃಂಭಣೆಯ ಹೂವಿನ ಪೂಜೆ

300x250 AD

ಕುಮಟಾ: ಪಟ್ಟಣದ ಅಧಿದೇವತೆ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಹೂವಿನ ಪೂಜೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಪಟ್ಟಣದ ದೇವರಹಕ್ಕಲದಲ್ಲಿ ನೆಲೆಸಿರುವ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಹೂವಿನ ಪೂಜೆ ನಿಮಿತ್ತ ಶ್ರೀ ದೇವಿಗೆ ಪರಿಮಳ ಭರಿತ ಹೂವುಗಳಿಂದ ಶೃಂಗರಿಸಲಾಯಿತು. ದೇವಿಗೆ ಮಾಡಲಾದ ಪುಷ್ಪಾಲಂಕಾರ ಅತೀ ಸುಂದರವಾಗಿ ಕಾಣುತ್ತಿರುವುದರಿಂದ ಅಲಂಕಾರಭೂಷಿತ ದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ದೇವಿಗೆ ಹಣ್ಣು-ಕಾಯಿ ಸೇವೆ ಸಲ್ಲಿಸಿದ ಭಕ್ತರು ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ಮುತೈದೆಯರು ದೇವಿಗೆ ಉಡಿ ತುಂಬಿ ಅರಿಶಿಣ-ಕುಂಕುಮ ಸೇವೆ ಗೈದರು. ರಾತ್ರಿ ನಡೆದ ಮಹಾ ಮಂಗಳಾರತಿ ಪೂಜೆ ಅದ್ಧೂರಿಯಾಗಿ ಸಂಪನ್ನಗೊಂಡಿತು. ಬಳಿಕ ತೀರ್ಥ-ಪ್ರಸಾದ ವಿತರಣೆ ಮಾಡಲಾಯಿತು. ಸಂಜೆ ನಡೆದ ಭಜನಾ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

300x250 AD
Share This
300x250 AD
300x250 AD
300x250 AD
Back to top