ಹೊನ್ನಾವರ: ತಾಲೂಕಿನ ಕಳಸಿನ ಮೋಟೆಯ ಸಮೀಪ ರೈಲು ಸೇತುವೆಯ ಮೇಲೆ ವ್ಯಕ್ತಿಯೊಬ್ಬ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.
ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಕಬ್ಬಿಣದ ಸಲಾಕೆಗೆ ನೇತಾಡುತ್ತಿದ್ದನ್ನು ನೋಡಿ ಸ್ಥಳೀಯರು ಮತ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮಂಗಳೂರು ಪ್ರೇಮ್ ನಗರದ ಸುನೀಲ್ ಲಾರೆನ್ಸ್ ರೋಡ್ರಿಗಿಸ್ ಮೃತ ಪಟ್ಟವರಾಗಿದ್ದು, ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದರು ಎಂದು ಪೋಷಕರು ತಿಳಿಸಿದ್ದಾರೆ. ಮೃತ ವ್ಯಕ್ತಿಯ ತಂದೆ ತಾಯಿ ಹೊನ್ನಾವರ ಪೊಲೀಸ್ ಠಾಣೆಗೆ ಆಗಮಿಸಿ ಗುರುತು ಪತ್ತೆ ಹಚ್ಚಿದ್ದಾರೆ. ಶವ ಮರಣೊತ್ತರ ಪರೀಕ್ಷೆಯ ಬಳಿಕ ಮೃತ ದೇಹ ಮಂಗಳೂರಿಗೆ ಕೊಂಡೊಯ್ದಿದ್ದಾರೆ.