Slide
Slide
Slide
previous arrow
next arrow

ಹಾರ್ಮೋನಿಯಂನಲ್ಲಿ ಪುಟಾಣಿ ಅದ್ವೈತ್ ಸಾಧನೆ

300x250 AD

ಶಿರಸಿ: ಹಾರ್ಮೋನಿಯಂನಲ್ಲಿ ನಗರದ ಕೆಎಸ್‌ಎಸ್ ರಸ್ತೆ ನಿವಾಸಿ ಪುಟಾಣಿ ಅದ್ವೈತ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆಯನ್ನ ಮಾಡಿದ್ದಾನೆ.
ನಗರದಲ್ಲಿ 75ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಎಂಟು ವರ್ಷದ ಪುಟಾಣಿ ಅದ್ವೈತ್ 1 ಘಂಟೆ 8 ನಿಮಿಷದಲ್ಲಿ 75 ಬಾರಿ ರಾಷ್ಟ್ರಗೀತೆಯನ್ನ ಬಾರಿಸುವ ಮೂಲಕ ದಾಖಲೆಯನ್ನ ಬರೆದಿದ್ದಾನೆ. ಅದ್ವೈತ್ ಸ್ಕೇಟಿಂಗ್ ಅಕಾಡೆಮಿ ಹಾಗೂ ಪಯಣ ಟೂರಿಸಂ ಸಂಸ್ಥಾಪಕ ಕಿರಣ್‌ಕುಮಾರ್ ಕುಡಾಳಕರ್ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆಯ ನಿರೀಕ್ಷಕಿ ನಿಶಾ ಕುಡಾಳಕರ್ ಅವರ ಪುತ್ರನಾಗಿರುವ ಅದ್ವೈತ್ ಈ ಹಿಂದೆ ಸ್ಕೇಟಿಂಗ್‌ನಲ್ಲಿ ಕಾರವಾರದಿಂದ ಬೆಂಗಳೂರಿನವರೆಗೆ ಹೋಗುವ ಮೂಲಕ ಸಾಧನೆಯನ್ನ ಮಾಡಿದ್ದನು.
ಇದೀಗ ಹಾರ್ಮೋನಿಯಂನಲ್ಲಿ ಏಷಿಯಾ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆಯನ್ನ ಮಾಡಿದ್ದು, ಪುಟಾಣಿಯ ಸಾಧನೆಗೆ ಇಡೀ ಕುಟುಂಬ ಮೆಚ್ಚುಗೆಯನ್ನ ವ್ಯಕ್ತಪಡಿಸಿದೆ.

300x250 AD
Share This
300x250 AD
300x250 AD
300x250 AD
Back to top