ಶಿರಸಿ: ನಗರದ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಕಬಡ್ಡಿಯಲ್ಲಿ ಔಡಾಳ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ದೇವೇಂದ್ರ ಮರಾಠಿ ಮಕ್ಕಳಿಗೆ ತರಬೇತಿ ನೀಡಿದ್ದರು. ವಿದ್ಯಾರ್ಥಿನಿಯರ ಸಾಧನೆಗೆ ಶಾಲಾ ಶಿಕ್ಷಕ ವೃಂದದವರು, ಎಸ್. ಡಿ. ಎಂ. ಸಿ. ಮಂಡಳಿಯವರು, ಹಳೆಯ ವಿದ್ಯಾರ್ಥಿ ಸಂಘದವರು, ಯುವಕ ಸಂಘದವರು ಹಾಗೂ ಊರ ನಾಗರಿಕರು ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ಬಾಲಕಿಯರ ಕಬಡ್ಡಿ:ಔಡಾಳ ವಿದ್ಯಾರ್ಥಿನಿಯರ ಸಾಧನೆ
