ಸಿದ್ದಾಪುರ; ತಾಲೂಕಿನ ಬಿದ್ರಕಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೋಲಶಿರ್ಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಬಹುಮಾನ ಪಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ. ಭಾಗವಹಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಒಟ್ಟು 17 ಬಹುಮಾನಗಳನ್ನು ಪಡೆದಿದ್ದಾರೆ.
ದಿಕ್ಷಾ ನಾಯ್ಕ ಆಶುಭಾಷಣದಲ್ಲಿ ಪ್ರಥಮ, ಲೋಚನಾ ನಾಯ್ಕ ಚಿತ್ರಕಲೆ (ಕಿರಿಯ ವಿಭಾಗ) ಪ್ರಥಮ, ಅಭಿನಯ ಗೀತೆ ತೃತೀಯ, ಗೀತಾ ನಾಯ್ಕ ಕಥೆ ಹೇಳುವುದು ಪ್ರಥಮ, ಭಾಷಣ ತೃತೀಯ, ಚಂದ್ರಿಕಾ ನಾಯ್ಕ ಛದ್ಮವೇಷ ಪ್ರಥಮ, ಬಿ.ಎನ್.ಪ್ರೇರಣಾ ಚಿತ್ರಕಲೆ ಪ್ರಥಮ, ನಿಶಾ ನಾಯ್ಕ ಹಿಂದಿ ಕಂಠಪಾಠ ಪ್ರಥಮ, ಹಾಸ್ಯ ದ್ವಿತೀಯ, ಸಿಆರ್.ಶ್ರಾವಣಿ ಅಭಿನಯ ಗೀತೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಶ್ರೇಯಾ ಗೌಡರ್ ಕಥೆ ಹೇಳುವುದು ದ್ವಿತೀಯ, ಸುಮನ್ ನಾಯ್ಕ ಆಶುಭಾಷಣ ದ್ವಿತೀಯ, ಸಂಜನಾ ನಾಯ್ಕ ಇಂಗ್ಲೀಷ ಕಂಠಪಾಠ ದ್ವಿತೀಯ, ಸಿಂಚನಾ ನಾಯ್ಕ ಕನ್ನಡ ಕಂಠಪಾಠ ತೃತೀಯ, ಭುವನ ನಾಯ್ಕ ಛದ್ಮವೇಷ ತೃತೀಯ, ಮಿಥುನ್ ನಾಯ್ಕ ಕ್ಲೇಮಾಡಲಿಂಗ್ ತೃತೀಯ, ವಾಣಿ ನಾಯ್ಕ ಕನ್ನಡ ಕಂಠಪಾಠ (ಹಿರಿಯ) ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.