Slide
Slide
Slide
previous arrow
next arrow

ಸೆ.17ಕ್ಕೆ ವರ್ಗಾಸರದಲ್ಲಿ ಯಕ್ಷಗಾನ

300x250 AD

ಶಿರಸಿ: ಇಲ್ಲಿನ ವರ್ಗಾಸರದ ಗಣಪತಿ ಮಹಾದೇವ ಭಟ್ಟ ಅವರ ಸ್ಮರಣಾರ್ಥ ಯಕ್ಷಗಾನ ಪ್ರದರ್ಶನ ಸೆ.17ರಂದು ಪುಟ್ಟನಮನೆ ಶಾಲಾ ಆವರಣದಲ್ಲಿ ನಡೆಯಲಿದೆ.

ಅಂದು ಸಾಯಂಕಾಲ 4 ಗಂಟೆಯಿಂದ ಆಯೋಜನೆಗೊಂಡ ಯಕ್ಷಗಾನದಲ್ಲಿ ಕಂಸವಧೆ ಮತ್ತು ಜ್ವಾಲಾಪ್ರತಾಪ ಆಖ್ಯಾನ ಪ್ರದರ್ಶನಗೊಳ್ಳಲಿದೆ. ಕಂಸವಧೆ ಆಖ್ಯಾನದ ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ಶಂಕರ ಭಾಗವತ ಯಲ್ಲಾಪುರ, ಎ.ಪಿ. ಫಾಟಕ್, ಲಕ್ಷ್ಮೀನಾರಾಯಣ ಸಂಪ, ವಿಘ್ನೇಶ್ವರ ಕೆಸರಕೊಪ್ಪ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ ಹೆಗಡೆ, ಚಪ್ಪರಮನೆ ಶ್ರೀಧರ ಹೆಗಡೆ, ಮೋಹನ ಭಾಸ್ಕರ ಹೆಗಡೆ ಹೆರವಟ್ಟಾ, ಪ್ರಸನ್ನ ಶೆಟ್ಟಿಗಾರ ವಿವಿಧ ಪಾತ್ರ ನಿರ್ವಹಿಸಲಿದ್ದಾರೆ. ಜ್ವಾಲಾಪ್ರತಾಪದ ಹಿಮ್ಮೇಳದಲ್ಲಿ ಚಂದ್ರಕಾಂತ ರಾವ್ ಮೂಡುಬೆಳ್ಳೆ, ಪರಮೇಶ್ವರ ಭಂಡಾರಿ, ಅನಿರುದ್ಧ ವರ್ಗಾಸರ, ರಾಕೇಶ ಮಲ್ಯ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಬಳ್ಕೂರು ಕೃಷ್ಣ ಯಾಜಿ, ಅಶೋಕ ಭಟ್ ಸಿದ್ದಾಪುರ, ಶಶಿಕಾಂತ ಶೆಟ್ಟಿ ಕಾರ್ಕಳ, ಬೆಳೆಯೂರು ಸಂಜಯ, ವಿನಯ ಬೆರೋಳ್ಳಿ, ಮಾಧವ ನಾಗೂರು, ಕೆ.ಜಿ. ಕಾರ್ತಿಕ, ನಾಗೇಶ ಕುಳಿಮನೆ, ದರ್ಶನ ಭಟ್ಟ, ಮಾರುತಿ ಬೈಲ್ಗದ್ದೆ ಪಾತ್ರಪೋಷಣೆ ಮಾಡಲಿದ್ದಾರೆ. ಲಕ್ಷ್ಮಣ ನಾಯ್ಕ‌ ಮಂಕಿ ವೇಷಭೂಷಣ ಒದಗಿಸಲಿದ್ದಾರೆ. ಪ್ರದರ್ಶನ ಉಚಿತವಾಗಿದ್ದು ಕಲಾಸಕ್ತರು ಭಾಗವಹಿಸಿ ಕಾರ್ಯಕ್ರಮ ಚಂದಗಾಣಿಸಿಕೊಡಬೇಕೆಂದು ಎಂದು ಕಾರ್ಯಕ್ರಮ ಸಂಯೋಜಕರಾದ ಆರ್. ಜಿ. ವರ್ಗಾಸರ ( ಹುಬ್ಬಳ್ಳಿ) ಮತ್ತು ಸಹೋದರರು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top