Slide
Slide
Slide
previous arrow
next arrow

ವಿಮಲ್ ಜಂಗಲ್ ಸ್ಟೇ’ಯಲ್ಲಿ ಕಳ್ಳತನ:ದೂರು ದಾಖಲು

300x250 AD

ದಾಂಡೇಲಿ: ನಗರ ಸಮೀಪದ ಅಂಬೇವಾಡಿಯಯಲ್ಲಿರುವ ವಿಮಲ್ ಜಂಗಲ್ ಸ್ಟೇಯ ಒಳಹೊಕ್ಕಿ ಪೆಡೆಸ್ಟಲ್ ಫ್ಯಾನ್‌ಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ.

ತಾಲ್ಲೂಕಿನ ಅಂಬೇವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಿಮಲ್ ಜಂಗಲ್ ಸ್ಟೇನ ಸುಜೀತ್ ಪಡವಳಕರ ಅವರ ಮಾಲೀಕತ್ವದ ವಿಮಲ್ ಜಂಗಲ್ ಸ್ಟೇಯ ಒಳಗಡೆ ಹೊಕ್ಕಿ ಯಾರೋ ಕಳ್ಳರು ಅಲ್ಲಿದ್ದ ಸುಮಾರು ರೂ.32 ಸಾವಿರ ಮೌಲ್ಯದ ಆ್ಯಂಕರ್ ಕಂಪೆನಿಯ 10 ಪೆಡೆಸ್ಟಾಲ್ ಫ್ಯಾನ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

300x250 AD

ಈ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸುಜೀತ್ ನಾಗೇಶ ಪಡವಳಕರ ಅವರು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ದಾಂಡೇಲಿ ಗ್ರಾಮೀಣ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಬಲ್ಲಮೂಲಗಳ ಪ್ರಕಾರ ವಿಮಲ್ ಜಂಗಲ್ ಸ್ಟೇಯಲ್ಲಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಕಳ್ಳತನ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ ಎಂಬ ಮಾಹಿತಿ ಸಿಕ್ಕಿದೆ.

Share This
300x250 AD
300x250 AD
300x250 AD
Back to top