• Slide
  Slide
  Slide
  previous arrow
  next arrow
 • ಮಕ್ಕಳಲ್ಲಿ ಸ್ಪರ್ಧಾ ಮನೋಭಾವ, ಆತ್ಮವಿಶ್ವಾಸ ಹೆಚ್ಚಿಸಲು ಪ್ರತಿಭಾ ಕಾರಂಜಿ ಸಹಕಾರಿ:ಸುರೇಶ ಗಾಂವಕರ

  300x250 AD

  ಕಾರವಾರ : ನಗರದ ಬಾಲಮಂದಿರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಕಾರವಾರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವು ನಡೆಯಿತು.

  ಕಾರವಾರ ಕ್ಲಸ್ಟರ್‌ನ 21 ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳ ಒಟ್ಟು ಸುಮಾರು 400 ವಿದ್ಯಾರ್ಥಿಗಳು, ಶಿಕ್ಷಕರು, ನಿರ್ಣಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಾರಂಭದಲ್ಲಿ ಬಾಲಮಂದಿರದ ಎಮ್.ಎಸ್.ವಾಗಲೆ ಸಭಾಭವನದಲ್ಲಿ ಕಾರವಾರದ ಸಿಆರ್‌ಪಿ ಪ್ರಶಾಂತ ಸಾವಂತ ಎಲ್ಲರನ್ನು ಸ್ವಾಗತಿಸಿದರು. ನಂತರ ನಗರಸಭೆಯ ಸದಸ್ಯರಾದ ಪ್ರೇಮಾನಂದ ಗುನಗಾ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

  ಕಾರವಾರ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸುರೇಶ ಗಾಂವಕರ, ಮಕ್ಕಳಲ್ಲಿ ಹುದುಗಿರುವ ಸೂಪ್ತ ಪ್ರತಿಭೆಗಳನ್ನು ಹೊರತರಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ. ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿರುವ ಈ ಶೈಕ್ಷಣಿಕ ವರ್ಷದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಕಲಿಕೆಯ ಮುಂದುವರಿದ ಭಾಗವಾಗಿದ್ದು, ಮಕ್ಕಳಲ್ಲಿ ಸ್ಪರ್ಧಾ ಮನೋಭಾವ, ಆತ್ಮವಿಶ್ವಾಸ, ಧೈರ್ಯವನ್ನು ತುಂಬಲು ಸಹಕಾರಿಯಾಗಿದೆ ಎಂದರು.

  300x250 AD

  ಹಿಂದೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅರುಣ ರಾಣೆಯವರು ಮಕ್ಕಳು ಪ್ರತಿಭೆಯ ಆಗರವಾಗಿದ್ದು, ಸರಿಯಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ಸಿಕ್ಕರೆ ಮಕ್ಕಳ ಬದುಕು ಬಂಗಾರವಾಗುತ್ತದೆ ಎನ್ನುತ್ತ ಮಾರ್ಗದರ್ಶನ ನೀಡುವುದು ಶಿಕ್ಷಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

  ವೇದಿಕೆಯಲ್ಲಿ ಸುಮತಿ ಧಾಮ್ಲೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಿರಿಜಾ ಬಂಟ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರವಾರ ಬಾಲಮಂದಿರದ ಪ್ರಾಚಾರ್ಯರರಾದ ಅಂಜಲಿ ಮಾನೆಯವರು ವಹಿಸಿ ಇಲಾಖೆಯ ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆ ಸದಾ ಸಹಕಾರ ನೀಡುವುದಾಗಿ ಹೇಳುತ್ತ, ಎಲ್ಲರಿಗೂ ಶುಭಕೋರಿದರು. ಕಾರ್ಯಕ್ರಮ ನಿರ್ವಹಣೆಯನ್ನು ಬಾಲಮಂದಿರದ ಶಿಕ್ಷಕಿ ಭಾಗ್ಯವತಿ ನಿರ್ವಹಿಸಿದರು. ಕೊನೆಯಲ್ಲಿ ಬಾಲಮಂದಿರದ ಶಿಕ್ಷಕಿ ಶೋಭಾರವರು ಎಲ್ಲರನ್ನು ವಂದಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top