• first
  second
  third
  previous arrow
  next arrow
 • ರೈತ ಮಹಿಳಾ ಉತ್ಪಾದಕ ಗುಂಪುಗಳ ಬಲವರ್ಧನೆಯಾಗಲಿ: ಕರೀಂ ಅಸದಿ

  300x250 AD

  ಹಳಿಯಾಳ: ಮಾನ್ಯ ಅಭಿಯಾನ ನಿರ್ದೇಶಕರು, ಕೆ.ಎಸ್.ಆರ್.ಎಲ್.ಪಿ.ಎಸ್. ಬೆಂಗಳೂರುರವರ ಸಂದೇಶದ ಮೇರೆಗೆ, ಜಿಲ್ಲಾ ಪಂಚಾಯತ ಕಾರವಾರದ ಯೋಜನಾ ನಿರ್ದೇಶಕ ಕರೀಂ ಅಸಾದಿ ಹಳಿಯಾಳ ಆರ್.ಸೆ.ಟಿಯಲ್ಲಿ ಐದು ದಿನಗಳ ಕೃಷಿ ಉದ್ಯೋಗ ಸಖಿಯರ ಮತ್ತು ವನ ಸಖಿ ತರಬೇತಿಯನ್ನು ಉದ್ಘಾಟಿಸಿದರು.
  ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂರ್ವದನಾ ಸಂಸ್ಥೆ, ಜಿಲ್ಲಾ ಪಂಚಾಯತ, ಉತ್ತರಕನ್ನಡ ಇವರು ಆಯೋಜಿಸಿದ್ದ ತರಬೇತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಯ್ಕೆಯಾದ ಕೃಷಿ ಉದ್ಯೋಗ ಸಖಿ ಮತ್ತು ವನ ಸಖಿಯರು ಹಾಜರಿದ್ದರು.

  ತರಬೇತಿಗೆ ಚಾಲನೆ ನೀಡಿದ ಮಾನ್ಯ ಯೋಜನಾ ನಿರ್ದೇಶಕ, ಸದರಿ ಅಭಿಯಾನವು ಗ್ರಾಮೀಣ ಪ್ರದೇಶದ ಬಡ ಮತ್ತು ದುರ್ಬಲ ವರ್ಗದ ಕುಟುಂಬದ ಮಹಿಳೆಯರನ್ನು ವಿವಿಧ ಹಂತಗಳ ವಿವಿಧ ಸಮುದಾಯ ಆಧಾರಿತ ಸಂಸ್ಥೆಗಳ ಮೂಲಕ ಸಂಘಟಿಸಿ ಆರ್ಥಿಕ ಮಟ್ಟವನ್ನು ದ್ವಿಗುಣಗೊಳಿಸುವುದರೊಂದಿಗೆ ಜೀವನ ಮಟ್ಟ ಉನ್ನತಿಕರಿಸುವುದಾಗಿ ತಿಳಿಸಿದರು. ಭಾರತದ ಕೃಷಿ ಪ್ರಧಾನ ದೇಶವಾಗಿರುವುದರಿಂದ ಗ್ರಾಮೀಣ ಪ್ರದೇಶದ ಸಣ್ಣ ಮತ್ತು ಅತಿ ಸಣ್ಣ ರೈತ ಮಹಿಳೆಯರನ್ನು ಗುರುತಿಸಿ ಉತ್ಪಾದಿಸುವ ವಿವಿಧ ಕೃಷಿ ಉತ್ಪನ್ನಗಳ ಮಾಹಿತಿ ಪಡೆದು ಮೌಲ್ಯ ವರ್ಧನೆ, ಮೌಲ್ಯ ಸರಪಳಿಗೊಳಿಸಿ: ರೈತರಿಗೆ ಆದಾಯ ಹೆಚ್ಚಿಸುವುದು ಯೋಜನೆಯ ಉದ್ದೇಶವಿರುವುದಾಗಿ ತಿಳಿಸಿದರು.

  ರಾಜ್ಯ ಕಾರ್ಯಕ್ರಮ: ದೃವಸ್ವಾಪರಾದ ಶ್ರೀಮತಿ ಮಂಗಳಾ ಪಾಟೀಲ್, ಜಿಲ್ಲೆಯಲ್ಲಿ ವಿವಿಧ ಕೃಷಿ ಸರಕುಗಳಾದ ಭತ್ತ, ಅರಿಶಿಣ, ಶುಂಠಿ, ಕೋಳಿ, ಮೀನು, ನರ್ಸರಿ, ಕಿರು ಅರಣ್ಯ ಉತ್ಪನ್ನಗಳ 551 ಉತ್ಪಾದಕ ಗುಂಪುಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು, ಸದರಿ ಉತ್ಪಾದಕ ಗುಂಪುಗಳಿಗೆ ಬ್ಯಾಂಕ್ ಸಂಪರ್ಕ ಮೌಲ್ಯ ಸರಪಳಿ, ಮೌಲ್ಯ ಪರ್ವನೆ, ವಿವಿಧ ಇಲಾಖೆಗಳ ಜೊತೆ ಒಗ್ಗೂಡಿಸುವಿಕೆ ಮತ್ತು ಮಾರುಕಟ್ಟೆ ಸಂಪರ್ಕಗೊಳಿಸಲು ಕೃಷಿ ಉದ್ಯೋಗ ಸಭೆ ಮತ್ತು ವನ ಸಖಿಯರಿಗೆ 5 ದಿನಗಳ ತರಬೇತಿ, ಇರುವುದಾಗಿ ತಿಳಿಸಿದರು.

  300x250 AD

  ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಳಿಯಾಳ ರಾಜ್ಯ ಸಂಪನ್ಮೂಲ ವ್ಯಕ್ತಿಗಳು, ನಿರ್ದೇಶಕರು,ಆರ್.ಸೆ.ಟಿ, ಹಾಗೂ ಜಿಲ್ಲಾ ಅಭಿಯಾನ ಘಟಕದ ದೈವಸ್ಥಾಪಕರು, ಎನ್.ಆರ್.ಎಲ್.ಎಮ್, ತಾಲೂಕು ಸಿಬ್ಬಂದಿಗಳು ಹಾಜರಿದ್ದರು. ವಿನಾಯಕ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.

  Share This
  300x250 AD
  300x250 AD
  300x250 AD
  Back to top